ಯಾರು ನಿವೇಶನದ ನಿಜವಾದ ಹಕ್ಕುದಾರರು, ಜಿಪಿಎ ಆಧಾರದ ಮೇಲೆ ದೇವರಾಜು ಅವರಿಗೆ ಇರುವ ಅಧಿಕಾರ ಎಷ್ಟರ ಮಟ್ಟಿಗೆ ಮಾನ್ಯ, ದಾಖಲೆಗಳ ಸತ್ಯಾಸತ್ಯತೆ ಏನು ಎಂದು ಸ್ಪಷ್ಟವಾಗಿಲ್ಲ. ಈ ಕಾರಣದಿಂದಾಗಿ ವಿವಾದ ಗಂಭೀರ ಹಂತಕ್ಕೆ ಹೋಗುವ ಸಾಧ್ಯತೆ ಇದೆ. ಈ ನಡುವೆ ಜಟಾಪಟಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಜಾಗದ ಜಿಪಿಎ ಹೋಲ್ಡರ್ ದೇವರಾಜು ಜ.28ರಂದು ನೀಡಿದ ದೂರಿನ ಮೇರೆಗೆ ಬಡಾವಣೆ ಠಾಣೆಯಲ್ಲಿ ಪುಷ್ಪಾ ಕಡೆಯ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಎಚ್.ಆರ್.ನಟರಾಜ್, ಮಲ್ಲೇಶ್, ರಾಜು, ದೇವರಾಜೇಗೌಡ ಮತ್ತು ದುರ್ಗಾ ಪ್ರಸಾದ್ ವಿರುದ್ಧ ಪ್ರಕರಣ ದಾಖಲಾಗಿದೆ.