ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಹಾಸನ ನಗರದ ವಿವಿಧ ವಾರ್ಡ್‌ಗಳಲ್ಲಿ ಉಂಟಾಗಿದ್ದ ಕುಡಿಯುವ ನೀರಿನ ಸಮಸ್ಯೆ ಕುರಿತು ಮನವಿ ಸಲ್ಲಿಸಲು ಮಹಾನಗರ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಲಾಯಿತು. ಆಯುಕ್ತರು ನೀರಿನ ವಿಭಾಗದ ಜವಾಬ್ದಾರಿಯನ್ನು ಇಂಜಿನಿಯರ್ ಕವಿತಾ ಅವರಿಗೆ ವಹಿಸಿರುವುದಾಗಿ ತಿಳಿಸಿ, ಅವರನ್ನು ಸಂಪರ್ಕಿಸಲು ಸೂಚಿಸಿದರು. ನಾನು ಹಾಗೂ ಕೆಲ ಸಾರ್ವಜನಿಕರು ಇಂಜಿನಿಯರ್ ಕಚೇರಿಗೆ ತೆರಳಿದ್ದೆವು. ಆ ವೇಳೆ ಇಂಜಿನಿಯರ್ ಕಚೇರಿಯಲ್ಲಿ ಇರಲಿಲ್ಲ. ಸುಮಾರು 10 ನಿಮಿಷಗಳ ಬಳಿಕ ಅವರು ಕಚೇರಿಗೆ ಬಂದಾಗ, ಯಾರು ನೀವು? ಯಾರ ಅನುಮತಿ ಪಡೆದು ಕಚೇರಿಗೆ ಬಂದಿದ್ದೀರಿ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿ, ಟೇಬಲ್ ಕುಟ್ಟುತ್ತಾ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರಿದರು.