ಅರಣ್ಯ ಇಲಾಖೆಯ ಇಟಿಎಫ್ ಆರ್‌ಎಫ್‌ಒ ತ್ರಿಮೂರ್ತಿ ಮಾತನಾಡಿ, ತಾಲೂಕಿನ ಕಣಗುಪ್ಪೆ ಗ್ರಾಮದಲ್ಲಿ ಗುರುವಾರ ಬೆಳಗ್ಗೆ 9.45 ಗಂಟೆ ಸಮಯದಲ್ಲಿ ಗ್ರಾಮದ ಸಿದ್ದಶೆಟ್ಟಿ ಅವರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸದ್ಯ ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಜತೆಗೆ ಕಣಗುಪ್ಪೆ ಗ್ರಾಮದ ಆಸುಪಾಸಿನ ಗ್ರಾಮಗಳಲ್ಲಿ 12 ಆನೆಗಳ ಹಿಂಡು ಬೀಡು ಬಿಟ್ಟಿದೆ. ಆದರೆ ಈ ಆನೆಗಳ ಗುಂಪಿನಿಂದ ಬೇರ್ಪಟ್ಟ ಒಂಟಿ ಸಲಗ ಗ್ರಾಮದೊಳಗೆ ನುಗ್ಗಿದ್ದರಿಂದ ಈ ಘಟನೆ ನಡೆದಿದೆ. ಸದ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ ಎಂದರು. ವಲಯ ಅರಣ್ಯಧಿಕಾರಿ ಯತೀಶ್ ಸೇರಿದಂತೆ ಕಣಗುಪ್ಪೆ ಗ್ರಾಮಸ್ಥರು ಇದ್ದರು.