ಹಿರೀಸಾವೆ ಹೋಬಳಿಯ ಜಿನ್ನೇನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಶ್ರೀ ಕಾಲಭೈರವೇಶ್ವರ ಹಾಗೂ ಗೋದ್ರೆಜ್ ಆಗ್ರೋವೆಟ್ ವತಿಯಿಂದ ಗರ್ಭಿಣಿ ಗೋಮಾತೆಗೆ ಸೀಮಂತ ಕಾರ್ಯ ಮಾಡಲಾಯಿತು. ಜೆ.ಎಸ್.ಕಾರ್ತಿಕ್, ಜೆ.ಎಸ್.ಆಕರ್ಷ, ಸುನಿಲ್.ಬಿ.ವಿ, ಎನ್.ಶ್ರೀಕಂಠ, ಡಾ.ಕವಿತಾ, ಪ್ರಮುಖರಾದ ಸುದೀಪ್, ಪ್ರಶಾಂತ್, ಕೇಶವಣ್ಣ, ಮಂಜುನಾಥ್ ಇತರರು ಇದ್ದರು.
ಹಿರೀಸಾವೆ: ಹೋಬಳಿಯ ಜಿನ್ನೇನಹಳ್ಳಿ ಗ್ರಾಮದಲ್ಲಿ ಶ್ರೀ ಕಾಲಭೈರವೇಶ್ವರ ಎಂಟರ್‌ಪ್ರೈಸಸ್ ಮತ್ತು ಗೋದ್ರೇಜ್ ಆಗ್ರೋವೆಟ್ ವತಿಯಿಂದ ಗರ್ಭಿಣಿ ಗೋ ಮಾತೆಗೆ ಗೌರವೋತ್ಸವ ಕಾರ್ಯಕ್ರಮದಡಿ ಹಸುವಿಗೆ ಸೀಮಂತ ಕಾರ್ಯ ಮಾಡಲಾಯಿತು.
ಜಿನ್ನೇನಹಳ್ಳಿ ಗೇಟ್ ಬಳಿಯಿರುವ ರೈತ ಕೇಶವಣ್ಣ ಅವರ ಎರಡು ಮಿಶ್ರತಳಿ ಸೀಮೆ ಹಸುಗಳ ಮೈ ತೊಳೆದು ಮೈಮೇಲೆ ಸೀರೆ ಹಾಕಿ ಹಣೆಗೆ ಅರಿಶಿಣ-ಕುಂಕುಮವಿಟ್ಟು ಕೊರಳಿಗೆ ಹೂವಿನ ಹಾರವನ್ನು ಹಾಕಿ ಸಿಂಗರಿಸಲಾಯಿತು.
ಬಳಿಕ ಟೇಬಲ್ ಮೇಲೆ ಫಲ-ಪುಷ್ಪಗಳು ಹಾಗೂ ವಿವಿಧ ಬಗೆಯ ಸಿಹಿ ತಿನಿಸುಗಳನ್ನು ಇರಿಸಿ ಸಿಂಗಾರಗೊಂಡಿರುವ ಗರ್ಭಿಣಿ ಹಸುಗಳನ್ನು ನಿಲ್ಲಿಸಿ ವಿಶೇಷ ಪೂಜೆ ಮಾಡುವ ಮೂಲಕ ಸೀಮಂತ ಕಾರ್ಯ ನೆರವೇರಿಸಲಾಯಿತು.
ಮಹಿಳೆಯರು ಹಸುಗಳ ಹಣೆಗೆ ಕುಂಕುಮ ಇಟ್ಟು ಅಕ್ಷತೆ ಹಾಕಿ ಹರಸಿದರು. ಹಿರಿಯ ತಾಯಂದಿರು ಸೋಬಾನ ಪದ ಹಾಡುವ ಮೂಲಕ ಸೀಮಂತ ಕಾರ್ಯಕ್ರಮಕ್ಕೆ ಮೆರಗು ನೀಡಿದರು.
ಶ್ರೀ ಕಾಲಭೈರವೇಶ್ವರ ಟ್ರೇಡರ್ಸ್ ಮಾಲೀಕರಾದ ಜೆ.ಎಸ್.ಕಾರ್ತಿಕ್, ಜೆ.ಎಸ್.ಆಕರ್ಷ, ಗೋದ್ರೆಜ್ ಕಂಪನಿಯ ಸುನಿಲ್.ಬಿ.ವಿ., ಎನ್.ಶ್ರೀಕಂಠ, ಡಾ.ಕವಿತಾ, ಪ್ರಮುಖರಾದ ಸುದೀಪ್, ಪ್ರಶಾಂತ್, ಕೇಶವಣ್ಣ, ಮಂಜುನಾಥ್ ಇತರರು ಇದ್ದರು.