ಜನರ ಜೀವನದ ಭಾಗವಾಗಿರುವ ಸಂವಿಧಾನ

ಹಾಸನ ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಾಸನ ವಕೀಲರ ಸಂಘ ವತಿಯಿಂದ ಸಂವಿಧಾನ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಹೇಮಾವತಿ, ಎಚ್.ಆರ್.ರವಿಕುಮಾರ್, ಕಾರ್ಲೆ ಮೊಗಣ್ಣಗೌಡ, ಬಿ.ಎಂ.ಶೈಲಾ ಇತರರಿದ್ದರು.
ಹಾಸನ ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಾಸನ ವಕೀಲರ ಸಂಘ ವತಿಯಿಂದ ಸಂವಿಧಾನ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಹೇಮಾವತಿ, ಎಚ್.ಆರ್.ರವಿಕುಮಾರ್, ಕಾರ್ಲೆ ಮೊಗಣ್ಣಗೌಡ, ಬಿ.ಎಂ.ಶೈಲಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಹೇಮಾವತಿ ಅಭಿಪ್ರಾಯ
ಹಾಸನ: ಸಂವಿಧಾನವು ನಮ್ಮ ಆಶೋತ್ತರಗಳನ್ನು ಈಡೇರಿಸಿದೆ ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಹೇಮಾವತಿ ಅಭಿಪ್ರಾಯಪಟ್ಟರು.
ಹಾಸನ ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಾಸನ ವಕೀಲರ ಸಂಘದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನವು ಭಾರತೀಯರಾದ ನಮಗೆ ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಎಲ್ಲವನ್ನೂ ನೀಡಿದೆ. ನಾವು ಸಂವಿಧಾನದ ಕೊಡುಗೆಗೆ ಬದ್ಧರಾಗಿ ಸಂವಿಧಾನವನ್ನು ಗೌರವಿಸಬೇಕಿದೆ. ಸಂವಿಧಾನದಲ್ಲಿ ಹೇಳಲಾಗಿರುವ ಹಕ್ಕುಗಳನ್ನು ಚಲಾಯಿಸುವ ಮುಂಚೆ ನಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕು. ಪ್ರತಿಯೊಬ್ಬ ಭಾರತೀಯನು ಸಂವಿಧಾನವನ್ನು ಗೌರವಿಸಿ ಅದರ ಘನತೆಯನ್ನು ಎತ್ತಿ ಹಿಡಿದಾಗ ಮಾತ್ರವೇ ಸಂವಿಧಾನ ನಮಗೆ ನೀಡಿರುವ ಎಲ್ಲ ಆಶೋತ್ತರಗಳನ್ನು ನಾವು ಈಡೇರಿಸಿದಂತಾಗುತ್ತದೆ. ಸಂವಿಧಾನ ಬದ್ಧವಾಗಿ ನೀಡಲಾಗಿರುವ ಹಕ್ಕುಗಳಿಗೆ ಚ್ಯುತಿ ಉಂಟಾದಾಗ ನಾವು ನ್ಯಾಯಾಲಯಗಳ ಮೂಲಕ ಅದನ್ನು ಸಂರಕ್ಷಿಸಿಕೊಳ್ಳಬಹುದು ಎಂದರು.
ಐದನೇ ಅಧಿಕ ಜಿಲ್ಲಾ ನ್ಯಾಯಾಧೀಶ ಎಚ್.ಆರ್.ರವಿಕುಮಾರ್ ಮಾತನಾಡಿ, ಸಂವಿಧಾನ ರಚನೆಯ ಆರಂಭಿಕ ಬೆಳವಣಿಗೆಗಳು ರಚನೆಯ ಹಾದಿಯನ್ನು ತಿಳಿಸುವ ಮೂಲಕ ಸಂವಿಧಾನದ ಲಕ್ಷಣಗಳು, ಪ್ರಸ್ತಾವನೆಯ ಭಾಗದ ವಿಶ್ಲೇಷಣೆಯನ್ನು ಮಾಡಿ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯ ಬಗ್ಗೆ ತಿಳಿಹೇಳಿದರು. ಸಂವಿಧಾನವು ಇಡೀ ಜಗತ್ತಿನಲ್ಲೇ ಅತ್ಯಂತ ಬೃಹತ್ ಸಂವಿಧಾನವಾಗಿದ್ದು, ನಮ್ಯ ಮತ್ತು ಅನಮ್ಯ ಲಕ್ಷಣಗಳನ್ನು ಹೊಂದಿದೆ. ಸಂವಿಧಾನವು ಇಡೀ ದೇಶದ ಜನರ ಜೀವನದ ಭಾಗವಾಗಿದೆ ಎಂದು ತಿಳಿಸಿದರು. ಅಲ್ಲದೆ ಈ ಸಂದರ್ಭದಲ್ಲಿ ಸಂವಿಧಾನ ರಚನೆಗೆ ಶ್ರಮಿಸಿದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಎಲ್ಲ ಮಹನೀಯರನ್ನು ನೆನೆಯುವ ಮೂಲಕ ಸಂವಿಧಾನದ ಕೊಡುಗೆಯನ್ನು ಬಣ್ಣಿಸಿದರು.
ವಕೀಲರ ಸಂಘದ ಅಧ್ಯಕ್ಷ ಕಾರ್ಲೆ ಮೊಗಣ್ಣಗೌಡ ಮಾತನಾಡಿ, ದೇಶದ ಸಂವಿಧಾನವು ದೇಶಕ್ಕೆ ಕೊಟ್ಟ ಕೊಡುಗೆಯಿಂದಾಗಿ ದೇಶದಲ್ಲಿ ಸ್ತ್ರೀ ಸಮಾನತೆ, ವಿವಿಧತೆಯಲ್ಲಿ ಏಕತೆ ಎಲ್ಲವನ್ನೂ ಒಳಗೊಂಡು ದೇಶವು ಜಗತ್ತಿನಲ್ಲೇ ಮೂರನೇ ಆರ್ಥಿಕತೆಯಲ್ಲಿ ಮೂರನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ. ಅಲ್ಲದೆ ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿಯನ್ನು ಸಾಧಿಸಿದೆ. ಇದು ನಮ್ಮ ದೇಶದ ಸಂವಿಧಾನದ ಶಕ್ತಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಒಂದನೇ ಅಧಿಕ ಜಿಲ್ಲಾ ನ್ಯಾಯಾಧೀಶ ಬಿ.ಎಂ.ಶೈಲಾ, ಎರಡನೇ ಅಧಿಕ ಜಿಲ್ಲಾ ನ್ಯಾಯಾಧೀಶ ಹಿದಾಯತ್ ಉಲ್ಲಾ ಶರೀಫ್, ಮೂರನೇ ಅಧಿಕ ಜಿಲ್ಲಾ ನ್ಯಾಯಾಧೀಶ ಆನಂದ, ಅಧಿಕ ಜಿಲ್ಲಾ ನ್ಯಾಯಾಧೀಶ ಎಚ್.ಎಂ.ದೇವರಾಜು, ಪ್ರಧಾನ ನ್ಯಾಯಾಧೀಶ ಮೊಹಮ್ಮದ್ ಅಶ್ರಫ್ ಹ್ಯಾರಿಸ್, ಜಿ.ಕೆ.ದಾಕ್ಷಾಯಿಣಿ, ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಗಿರಿಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net