ಸುಮಲತಾರನ್ನು ನೆನಪಿಸಿ ಮಾಜಿ ಸಚಿವ ಎಚ್​.ಡಿ.ರೇವಣ್ಣರಿಗೆ ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ಸವಾಲು!

HD Revanan
Published on

ಹಾಸನ: ಒಂದು ರೂಪಾಯಿ ಭ್ರಷ್ಟಾಚಾರ ಮಾಡಿದ್ದೇನೆಂದು ಸಾಬೀತುಪಡಿಸಿದರೆ ಈಗಲೇ ರಾಜೀನಾಮೆ ನೀಡುತ್ತೇನೆ. ನನಗೆ ರಾಜಕೀಯ ಅನಿವಾರ್ಯವಲ್ಲ ಎಂದು ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ಮಾಜಿ ಸಚಿವ ಎಚ್.ಡಿ. ರೇವಣ್ಣ ವಿರುದ್ಧ ಹರಿಹಾಯ್ದರು.

ನಾನೇನು ಅವರ ಕೈ ಗೊಂಬೆ ಅಲ್ಲ, ನಾನೇನ್ ತಪ್ಪು ಮಾಡಿದಿನಿ ಅಂತ ಹೀಗೆಲ್ಲ ಮಾಡ್ತಾ ಇದಿರಿ. ಮಹಿಳೆಯರನ್ನ ಏಕ ವಚನದಲ್ಲಿ ಕರೀತಿರಿ. ಸುಮಲತಾ ಅವರಿಗೂ ಹಿಂಗೆ ಅಂದಿದ್ದಿರಿ. ಅಧಿಕಾರ ಬೇಕಿದ್ದರೆ ನನ್ನ ಮೇಲಿನ ಆರೋಪ ಸಾಬೀತುಪಡಿಸಿ ನಿಮ್ಮ ಶ್ರೀಮತಿ ಅವರನ್ನ ಕರೆದು ಕೂರಿಸಿ ಎಂದು ಸವಾಲೆಸೆದರು.

ವಿವೇಚನಾ ಅನುದಾನ ಬೇಕಾದಂಗೆ ಬಳಸಿಕೊಂಡಿದ್ದೇನೆ ಎಂದಿದ್ದೀರಿ. ಹೀಗೆಲ್ಲ ಸುಳ್ಳು ಹೇಳಿ ಯಾಕ್ರಿ ದಿಕ್ಕು ತಪ್ಪಿಸ್ತಿರಿ ಅಂತ ಗುಡುಗಿದರು. ಪುಣ್ಯಾತ್ಮ ಸಚಿವ ಈಶ್ವರಪ್ಪ ಒಂದು ಕೋಟಿ ಕೊಟ್ಟಿದ್ದಾರೆ. ಆದರೆ ನೀವು ಸಚಿವರಾಗಿದ್ದಾಗ ಜಿಪಂಗೆ ಎಷ್ಟು ಕೊಟ್ಟಿದಿರಿ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net