More

    ಬಿಜೆಪಿಯಲ್ಲಿನ ಭಿನ್ನಮತ‌ ವಿಚಾರ ಸಿಎಂ ಬಿಎಸ್​ವೈ ಹೇಳಿದ್ದು ಹೀಗೆ…

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕೆಲ ಬಿಜೆಪಿ ಶಾಸಕರು ಬಂಡಾಯವೆದ್ದಿದ್ದು, ರಹಸ್ಯವಾಗಿ ಸಭೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಶಾಸಕರೊಂದಿಗೆ ಚರ್ಚಿಸಲು ಸಿಎಂ ತುರ್ತು ಸಭೆ ಕರೆದಿದ್ದಾರೆ ಎಂಬ ಸುದ್ದಿಯನ್ನು ಸ್ವತಃ ಸಿಎಂ ಬಿಎಸ್​ವೈ ತಳ್ಳಿ ಹಾಕಿದ್ದಾರೆ.

    ಇದನ್ನೂ ಓದಿ: ರಾಜ್ಯಸಭಾ ಸದಸ್ಯ ಎಂ.ಪಿ. ವೀರೇಂದ್ರ ಕುಮಾರ್​ ನಿಧನ

    ಟ್ವೀಟ್​ ಮಾಡಿರುವ ಬಿಎಸ್​ವೈ ಪಕ್ಷದ ಕೆಲವು ಶಾಸಕರೊಂದಿಗೆ ಚರ್ಚಿಸಲು ನಾನು ತುರ್ತು ಸಭೆ ಕರೆದಿದ್ದೇನೆ ಎನ್ನುವ ಸುದ್ದಿ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದನ್ನು ಗಮನಿಸಿದ್ದೇನೆ. ಇದು ಸತ್ಯಕ್ಕೆ ದೂರವಾದ ಸಂಗತಿ. ಅಂತಹ ಯಾವುದೇ ಸಭೆಯನ್ನು ನಾನು ಕರೆದಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನಂದು ತಿಳಿಸಿದ್ದಾರೆ.

    ಕಳೆದ ವಾರ 13ಕ್ಕೂ ಹೆಚ್ಚು ಬಿಜೆಪಿ‌ ಶಾಸಕರು ಸಭೆ ಸೇರಿದ್ದರು ಎನ್ನಲಾಗಿದೆ. ನಿನ್ನೆ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಬಿಎಸ್​ವೈ ಭೇಟಿ ಮಾಡಿದ್ದ ಉಮೇಶ್ ಕತ್ತಿ, ರಮೇಶ್ ಕತ್ತಿಗೆ ರಾಜ್ಯಸಭಾ ಟಿಕೆಟ್ ಬೇಡಿಕೆ ಇಟ್ಟಿದ್ದಾರೆ. ಚರ್ಚೆ ವೇಳೆ ನಿಮ್ಮನ್ನು‌ ಸಚಿವರಾಗಿ ಮಾಡುತ್ತೇವೆ ಎಂದು ಸಿಎಂ ಭರವಸೆ ನೀಡಿದ್ದಕ್ಕೆ, ನನ್ನ ಮಂತ್ರಿ ಮಾಡೋದು ನಂತರದ ವಿಚಾರ, ನಾನು ಅದಕ್ಕೆ ಅರ್ಹನೂ ಹೌದು. ಹಿಂದೆಯೇ ಆಗಬೇಕಾಗಿತ್ತು ಆಗಿಲ್ಲ. ಆದರೆ ರಮೇಶ್ ಕತ್ತಿಗೆ ಹಿಂದೆ ಕೊಟ್ಟ ಭರವಸೆಯಂತೆ ಟಿಕೆಟ್ ಕೊಟ್ಟು ಮಾತಿನಂತೆ ನಡೆದುಕೊಳ್ಳಿ ಎಂದು ಸಿಎಂಗೆ ಖಡಕ್ಕಾಗಿ ಹೇಳಿದ್ದಾರೆ ಎಂದು ರಾಜಕೀಯ ಮೂಲಗಳಿಂದ ತಿಳಿದುಬಂದಿದೆ.

    ಇದನ್ನೂ ಓದಿ: VIDEO| ದೇಶದ ಅರ್ಧಕ್ಕರ್ಧ ಜನ್ರಿಗೆ ಕರೊನಾ ಗ್ಯಾರೆಂಟಿ ಎನ್ನುತ್ತಿದೆ ವರದಿ: ಆದ್ರೂ ಗುಡ್​ ನ್ಯೂಸ್​ ಸಹ ಇದೆ!

    ನಿನ್ನೆ ಸಿಎಂ ಭೇಟಿ ಬಳಿಕ ಇಂದು ಉತ್ತರ ಕರ್ನಾಟಕದ ಹಿರಿಯ ಬಿಜೆಪಿ ಶಾಸಕದು ಇಂದು ಮತ್ತೊಮ್ಮೆ ಸಭೆ ಸೇರಿಲಿದ್ದಾರೆ ಎನ್ನಲಾಗಿದೆ.

    ಹುಟ್ಟುಹಬ್ಬ ದಿನದಂದು ರೆಬೆಲ್ ಸ್ಟಾರ್ ನೆನಪುಗಳು: ಉಳಿದವರು ಕಂಡಂತೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts