More

    VIDEO| ದೇಶದ ಅರ್ಧಕ್ಕರ್ಧ ಜನ್ರಿಗೆ ಕರೊನಾ ಗ್ಯಾರೆಂಟಿ ಎನ್ನುತ್ತಿದೆ ವರದಿ: ಆದ್ರೂ ಗುಡ್​ ನ್ಯೂಸ್​ ಸಹ ಇದೆ!

    ಬೆಂಗಳೂರು: ಮಹಾಮಾರಿ ಕರೊನಾ ವೈರಸ್​ನಿಂದ ಇನ್ನೇನು ಬಿಡುಗಡೆ ಹೊಂದಲಿದ್ದೇವೆ ಎನ್ನುವ ನಿರೀಕ್ಷೆಯಲ್ಲಿದ್ದ ರಾಜ್ಯದ ಜನರಿಗೆ ರಾಜ್ಯ ಕರೊನಾ ಟಾಸ್ಕ್​ ಫೋರ್ಸ್​ ನೀಡಿರುವ ವರದಿ ಆಘಾತ ಉಂಟುಮಾಡಿದೆ.

    ಇದನ್ನೂ ಓದಿ: ಭಾರತ-ಚೀನಾ ಗಡಿ ಘರ್ಷಣೆ: ಪ್ರಧಾನಿ ಮೋದಿಗೆ ಕರೆ ಮಾಡಿ ಡೊನಾಲ್ಡ್​ ಟ್ರಂಪ್​ ಚರ್ಚಿಸಿದ್ದೇನು?

    ದೇಶ ಹಾಗೂ ರಾಜ್ಯದಲ್ಲಿ ಸದ್ಯಕ್ಕೆ ಕರೊನಾಸುರ ತನ್ನ ಅಟ್ಟಹಾಸವನ್ನು ಕಡಿಮೆ ಮಾಡುವುದಿಲ್ಲ ಎಂಬುದು ತಿಳಿದುಬಂದಿದೆ. ಡಿಸೆಂಬರ್​ ವೇಳೆಗೆ ಕರೊನಾ ವೈರಸ್​ ಸೋಂಕು ಹೆಚ್ಚಾಗಲಿದ್ದು, ದೇಶದ ಅರ್ಧಕ್ಕರ್ಧ ಜನರಿಗೆ ಸೋಂಕು ತಗುಲುವುದು ಗ್ಯಾರೆಂಟಿ ಎಂದು ರಾಜ್ಯ ಹೆಲ್ತ್​ ಟಾಸ್ಕ್​ ಫೋರ್ಸ್​ ನ್ಯೂಡಲ್​ ಅಧಿಕಾರಿ ಡಾ. ರವಿ ಅವರು ದಿಗ್ವಿಜಯ ನ್ಯೂಸ್​ಗೆ ಮಾಹಿತಿ ನೀಡಿದ್ದಾರೆ.

    ಮತ್ತೊಂದು ಶಾಕಿಂಗ್​ ವಿಚಾರವೇನೆಂದರೆ ಬಹುತೇಕ ಜನರಲ್ಲಿ ಸೋಂಕು ತಿಳಿಯುವುದೇ ಇಲ್ಲವಂತೆ. 4ನೇ ಹಂತದ ಲಾಕ್​ಡೌನ್​ ಮೇ 31ಕ್ಕೆ ಮುಗಿಯಲಿದ್ದು, ಆ ಬಳಿಕ ಕರೊನಾ ವೈರಸ್​ ಸಮುದಾಯ ಪ್ರಸರಣವಾಗುವುದರೊಂದಿಗೆ ಜೂನ್​ ನಂತರ ಸೋಂಕಿನ ಪ್ರಕರಣಗಳು ದ್ವಿಗುಣವಾಗುವ ಸಾಧ್ಯತೆ ಇದೆ ಎಂದು ರವಿ ಅವರು ತಿಳಿಸಿದ್ದಾರೆ.

    ಖುಷಿ ವಿಚಾರವೂ ಇದೆ
    ಶ್ವಾಸಕೋಸಗಳಿಗೆ ಹಾನಿ ಉಂಟುಮಾಡುವ ವೈರಸ್​ಗಳು ಈಗಾಗಲೇ ಸಾಕಷ್ಟು ಬಂದಿವೆ. ಇದು ಕೂಡ ಹಾಗೇ, ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತಾ ಹೋಗುತ್ತದೆ. ಗುಡ್​ ನ್ಯೂಸ್​ ಏನೆಂದರೆ, ಈ ಸೋಂಕು ಶೇ. 90 ರಷ್ಟು ಜನರಿಗೆ ಬಂದಿದ್ದು ಗೊತ್ತಾಗುವುದಿಲ್ಲ ಹಾಗೂ ಹೋಗುವುದು ಗೊತ್ತಾಗುವುದಿಲ್ಲ ಎಂದರು.

    ಇದನ್ನೂ ಓದಿ: ನರೇಗಾ ಅಕ್ರಮ, 43 ನೌಕರರಿಗೆ ಶಿಕ್ಷೆ ಖಾತ್ರಿ: 18 ಸಿಬ್ಬಂದಿ ವಜಾ, 9 ಪಿಡಿಒಗಳ ಸಸ್ಪೆಂಡ್

    ಸೋಂಕು ತಡೆಗಟ್ಟುವುದು ಸರ್ಕಾರದ ಜವಾಬ್ದಾರಿಯಲ್ಲ. ಜನರ ಜವಾಬ್ದಾರಿಯಾಗಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಿದೆ. ಲಾಕ್​ಡೌನ್​ ಸಡಿಲಿಕೆಯಾಗಿದ್ದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್​ ಧರಿಸುವುದು ಹಾಗೂ ಸ್ಯಾನಿಟೈಸರ್​ ಬಳಕೆ ಸೇರಿದಂತೆ ಅನೇಕ ಉಪಕ್ರಮಗಳನ್ನು ತೆಗೆದುಕೊಂಡು ಸೋಂಕು ತಗುಲುವ ಪ್ರಮಾಣವನ್ನು ತಗ್ಗಿಸಬೇಕೆಂದು ಡಾ. ರವಿ ಸಲಹೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಫ್ರೆಂಡ್ಸ್​ ಪಾರ್ಟಿಯಲ್ಲಿ ಬಿಜೆಪಿ ಮುಖ್ಯಸ್ಥನ ಸೊಸೆ ನಿಗೂಢ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts