ಗನ್​ಮ್ಯಾನ್ ಆಗಿದ್ದವನು ಆರ್​ಟಿಒ ಇನ್ಸ್​ಪೆಕ್ಟರ್ ಆಗಿದ್ದಾನೆ: ಎಚ್.ಡಿ.ರೇವಣ್ಣ ಕೆಂಗಣ್ಣು ಯಾರ ಮೇಲೆ?

hd revanna
Published on

ಹಾಸನ: ಸಾರಿಗೆ ಇಲಾಖೆ 85 ಕೋಟಿ ರೂ. ವರ್ಗಾವಣೆ ಡೀಲ್ ಮಾಡಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪ ಮಾಡಿದ್ದಾರೆ.

ಶಾಸಕರೊಬ್ಬರಿಗೆ ಗನ್ ಮ್ಯಾನ್ ಆಗಿದ್ದ ಮಲ್ಲಿಕಾರ್ಜುನ್ ಈಗ ಆರ್​ಟಿಒ ಇನ್ಸ್​ಪೆಕ್ಟರ್ ಆಗಿ ಬಿಜಾಪುರದಲ್ಲಿದ್ದಾರೆ. ಈತನೇ ಎಲ್ಲ ವರ್ಗಾವಣೆ ದಂಧೆಯ ರುವಾರಿ ಎಂದು ರೇವಣ್ಣ ಆರೋಪಿಸಿದ್ದಾರೆ.

ರಾಜ್ಯದಲ್ಲಿ 14 ಚೆಕ್​ಪೋಸ್ಟ್ ಇದೆ. ಪ್ರತೀ ತಿಂಗಳು 14 ಕೋಟಿ ರೂ.ನಂತೆ ವರ್ಷಕ್ಕೆ 120 ಕೋಟಿ ವಸೂಲಿಯಾಗುತ್ತಿದೆ ಎಂದು ರೇವಣ್ಣ, ಈ ಸರ್ಕಾರ ಇರೋವರೆಗೂ ಎಸಿಬಿ ಹಾಗೂ ಲೋಕಾಯುಕ್ತ ಬಂದ್ ಮಾಡೋದು ಒಳಿತು ಎಂದು ಟೀಕಿಸಿದರು.

ಸದ್ಯ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನ ಒಂದೊಂದೇ ಇಲಾಖೆಗಳ ದಾಖಲೆ ಸಮೇತ ಭ್ರಷ್ಟಾಚಾರ ಸಾಬೀತು ಮಾಡುವೆ ಎಂದು ರೇವಣ್ಣ ಸವಾಲು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net