

ಲಂಡನ್: ಮಹಾಮಾರಿ ಕರೊನಾ ವೈರಸ್ ನಮ್ಮ ಜೀವನದ ಬಹುತೇಕ ಅಂಶಗಳ ಮೇಲೆ ಹಾನಿಯುಂಟು ಮಾಡಿದ್ದು, ಸೆಕ್ಸ್ ಕೂಡ ಇದರಿಂದ ಹೊರತಾಗಿಲ್ಲ.
ವೈರಸ್ ಹರಡುವುದಕ್ಕೂ ಮೊದಲು ಹಾಗೂ ವೈರಸ್ ನಂತರದ ಸೆಕ್ಸ್ ಜೀವನದಲ್ಲಿ ವ್ಯತ್ಯಾಸ ಕಂಡುಬಂದಿರುವುದಾಗಿ ಸಂಶೋಧನೆಯಲ್ಲಿ ತಿಳಿದುಬಂದಿದೆ. ವೈರಸ್ಗೂ ಮೊದಲು ಹೋಲಿಸಿದರೆ ಈಗ ಮುಖಾಮುಖಿ ಸಂಪರ್ಕವಿಲ್ಲದ ಸಂಭೋಗದ ಭಂಗಿ (ಸೆಕ್ಸ್ ಪೊಜಿಸನ್) ಗಳನ್ನು ಅಂತರ್ಜಾಲದಲ್ಲಿ ಹೆಚ್ಚು ಹುಡುಕಾಡಿದ್ದಾರೆ.
ಕಳೆದ ತಿಂಗಳುಗಳಲ್ಲಿ "ರಿವರ್ಸ್ ಕೌ ಗರ್ಲ್" ಭಂಗಿಯನ್ನು ಬಿಟನ್ನರು 60 ಸಾವಿರಕ್ಕೂ ಹೆಚ್ಚು ಬಾರಿ ಹುಡುಕಾಡಿದ್ದಾರೆ. ಡಾಗಿ ಸ್ಟೈಲ್ 18,100 ಬಾರಿ ವೀಕ್ಷಣೆ ಮಾಡಲಾಗಿದೆ. ಮಾರ್ಚ್ ಲಾಕ್ಡೌನ್ಗೂ ಮೊದಲು ಜನವರಿಯಲ್ಲಿ ರಿವರ್ಸ್ ಕೌ ಗರ್ಲ್ 49,500 ಬಾರಿ ಹುಡುಕಾಡಲಾಗಿದೆ. ಡಾಗಿ ಸ್ಟೈಲ್ ಅನ್ನು 14,800 ಬಾರಿ ವೀಕ್ಷಿಸಲಾಗಿದೆ.
ಇದೆಲ್ಲದಕ್ಕೂ ಕಾರಣ ಕರೊನಾ ವೈರಸ್. ಸುರಕ್ಷಿತ ಸೆಕ್ಸ್ ನಡೆಸಲು ಲೈಂಗಿಕ ಆರೋಗ್ಯ ಚಾರಿಟಿ "ದಿ ಟೆರೆನ್ಸ್ ಹಿಗ್ಗಿನ್ಸ್ ಟ್ರಸ್ಟ್" ಸಂಭೋಗಿಗಳಿಗೆ ಸಲಹೆ ನೀಡಿದ ಬಳಿಕ ಬದಲಾವಣೆಯಾಗಿದೆ ಎಂದು ತಿಳಿದುಬಂದಿದೆ. ಸೋಂಕಿನಿಂದ ಪಾರಾಗಲು ಪರಸ್ಪರ ಚುಂಬಿಸುವುದು ಹಾಗೂ ಮುಖವನ್ನು ಮುಚ್ಚಿಕೊಳ್ಳಲು ಸಲಹೆ ನೀಡಲಾಗಿತ್ತು. ಅಲ್ಲದೆ, ಪರಸ್ಪರ ಮುಖವನ್ನು ಸಂಪರ್ಕಿಸದ ಸೆಕ್ಸ್ ಭಂಗಿಗಳನ್ನು ಆಯ್ಕೆ ಮಾಡಿಕೊಳ್ಳಲು ಹೇಳಲಾಗಿತ್ತು.
ಕ್ಲೀನಿಂಗ್ ಫರ್ಮ್ ಎಂಡ್ ಆಫ್ ಟೆನನ್ಸಿ ಲಂಡನ್ ಸಂಸ್ಥೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಕಳೆದ ತಿಂಗಳಲ್ಲಿ ಸುಮಾರು 2.7 ಮಿಲಿಯನ್ ಬಾರಿ ಸೆಕ್ಸ್ ಭಂಗಿಗಳನ್ನು ಹುಡುಕಾಡಲಾಗಿದೆ. ಮೊದಲೆರಡು ಸ್ಥಾನವನ್ನು ರಿವರ್ಸ್ ಕೌ ಗರ್ಲ್ ಮತ್ತು ಡಾಗಿ ಸ್ಟೈಲ್ ಪಡೆದುಕೊಂಡಿದೆ. ಉಳಿದಂತೆ ಸ್ಪೂನಿಂಗ್ (18,100), 69 (12,100), ವ್ಹೀಲ್ಬಾರೋ (880), ಫ್ಲಾಟಿರೋನ್ (320 ), ಲೀಪ್ಫ್ರಾಗ್ (210 ) ಮತ್ತು ದಿ ಶ್ಯಾಡ್ (90) ನಂತರದ ಸ್ಥಾನಗಳಲ್ಲಿವೆ.
ಇಷ್ಟೇ ಅಲ್ಲದೆ, ದಂಪತಿಗಳು ಕರೊನಾದಿಂದ ಪಾರಾಗಲು ಫೋನ್ ಸೆಕ್ಸ್ ಮತ್ತು ಸೆಕ್ಸ್ ಆಟಿಕೆಗಳಲ್ಲೂ ತೊಡಗಿಕೊಂಡಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ ಕರೊನಾ ಮುಂಚೆಗೂ ಹಾಗೂ ಕರೊನಾ ನಂತರಕ್ಕೂ ಸೆಕ್ಸ್ ಜೀವನದಲ್ಲಿ ಭಾರಿ ಬದಲಾವಣೆಯಾಗಿದೆ. ಕರೊನಾ ಭಯದಿಂದ ಸುರಕ್ಷಿತ ಲೈಂಗಿಕ ಕ್ರಿಯೆಗೆ ಜನರು ಒತ್ತು ಕೊಟ್ಟಿದ್ದಾರೆಂಬುದು ಸಂಶೋಧನೆಯಲ್ಲಿ ಬಹಿರಂಗವಾಗಿದೆ. (ಏಜೆನ್ಸೀಸ್)