ಕೊಂಡೆವೂರಿನಲ್ಲಿ ಸಂಭ್ರಮದ ಕೊಯ್ಲು ಉತ್ಸವ

Bdk_harvest
Published on

ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದ ಧಾನ್ಯಲಕ್ಷ್ಮೀ ಕೃಷಿ ಯೋಜನೆಯಡಿ ಸಾವಯವ ಪದ್ಧತಿಯಲ್ಲಿ ಬೆಳೆದ ಭತ್ತವನ್ನು ಕಟಾವು ಮಾಡುವ ಕೊಯ್ಲು ಉತ್ಸವ ಭಾನುವಾರ ಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು.

ಕೃಷಿ ಸಾಧಕ ತಿಮ್ಮಪ್ಪ ಭಂಡಾರಿ ಬೊಳ್ಳಾರು, ತ್ಯಾಂಪಣ್ಣ ಶೆಟ್ಟಿ ದೇರಂಬಳ, ಮೋಹನ್‌ದಾಸ್ ಕೊಂಡೆವೂರು, ಶೀನ ಕೊರಂಬಳ, ಹಿರಿಯ ಕೃಷಿ ಸಾಧಕಿ ಕಮಲಾ ಹೇರೂರು ಮೊದಲಾದ ಹಿರಿಯರ ಜತೆ ಮಾತೆಯರು, ಆಶ್ರಮದ ಕಾರ್ಯಕರ್ತರು, ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ವಿದ್ಯಾರ್ಥಿಗಳು ಸೇರಿ ಗದ್ದೆಯಲ್ಲಿ ಭತ್ತ ಕಟಾವು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net