ನೆಟ್ಟಣಿಗೆ ಮುಡ್ನೂರಿನಲ್ಲಿ ಕೆಪಿಎಸ್ ಸ್ಕೂಲ್‌ಗೆ ಶಿಫಾರಸು :ಶಾಸಕ ಅಶೋಕ್‌ ಕುಮಾರ್ ರೈ ಮಾಹಿತಿ

New Project (6)
Published on

ಪುತ್ತೂರು ಗ್ರಾಮಾಂತರ: ಕರ್ನಾಟಕದ ಗಡಿ ಗ್ರಾಮವಾದ ನೆಟ್ಟಣಿಗೆ ಮುಡ್ನೂರಿನಲ್ಲಿ ಕೆಪಿಎಸ್ ಮಾದರಿ ಸ್ಕೂಲ್ ಆರಂಭಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ನೆಟ್ಟಣಿಗೆ ಮುಡ್ನೂರು ಗ್ರಾಮಕ್ಕೆ ಇನ್ನೂ ಹೆಚ್ಚಿನ ಅನುದಾನ ನೀಡುವ ಮೂಲಕ ಗಡಿ ಗ್ರಾಮವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.

ನೆಟ್ಟಣಿಗೆ ಮುಡ್ನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಂಆರ್‌ಪಿಎಲ್ 30 ಲಕ್ಷ ರೂ. ಸಿಎಸ್‌ಆರ್ ಅನುದಾನದಲ್ಲಿ ನಿರ್ಮಾಣವಾಗಲಿರುವ ಎರಡು ತರಗತಿ ಕೊಠಡಿ ಮತ್ತು ಶೌಚಗೃಹಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ನೆಟ್ಟಣಿಗೆ ಮುಡ್ನೂರು ಸರ್ಕಾರಿ ಪ್ರೌಢಶಾಲೆಯ ಕಾರ್ಯಾಧ್ಯಕ್ಷ ಶ್ರೀರಾಮ ಪಕ್ಕಳ ಕರ್ನೂರುಗುತ್ತು ಮಾತನಾಡಿದರು. ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ಅಧ್ಯಕ್ಷೆ ಫೌಝಿಯಾ ಇಬ್ರಾಹಿಂ, ಉಪಾಧ್ಯಕ್ಷ ರಾಮ ಮೇನಾಲ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್‌ಕುಮಾರ್ ಭಂಡಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಪಂಚಾಯಿತಿ ಸದಸ್ಯರಾದ ರಮೇಶ್ ರೈ ಸಾಂತ್ಯ, ಇಬ್ರಾಹಿಂ ಪಳ್ಳತ್ತೂರು, ವೆಂಕಪ್ಪ ನಾಯ್ಕ ಮೇನಾಲ, ಇಂದಿರಾ, ಪ್ರ್ರಫುಲ್ಲಾ ರೈ, ಕುಸುಮಾ ಕರ್ನೂರು, ಲಲಿತಾ ಮೇನಾಲ, ವಲಯ ಕಾಂಗ್ರೆಸ್ ಅಧ್ಯಕ್ಷ ಎನ್.ಮೂಸನ್, ಶಿಕ್ಷಣ ತಜ್ಞ ಸದಾಶಿವ ರೈ ನಡುಬೈಲು, ಖಾದರ್ ಕರ್ನೂರು, ಕರ್ನೂರು ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಸೂಫಿ ಬಾಂಟಡ್ಕ, ಪ್ರೌಢಶಾಲಾ ಮೇಲುಸ್ತುವಾರಿ ಸಮಿತಿ ಸದಸ್ಯರಾದ ವಿಕ್ರಂ ರೈ ಸಾಂತ್ಯ, ಮಹಮ್ಮದ್ ಪಳ್ಳತ್ತಾರು, ಅಬ್ದುಲ್ ಖಾದರ್ ಸುರಳಿಮೂಲೆ, ಕೆ.ಎಂ.ಮೊಹಮ್ಮದ್ ಮೇನಾಲ, ಅಶ್ರಫ್ ಕತಾರ್, ಕಟ್ಟಡ ಕಾಮಗಾರಿ ಗುತ್ತಿಗೆದಾರ ಅಜೀಜ್ ಓಣಿಯಡ್ಕ ಮತ್ತಿತರರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ಪ್ರೇಮ್‌ಕುಮಾರ್ ಸ್ವಾಗತಿಸಿದರು. ಮಹಾಬಲ ರೈ ಕರ್ನೂರು ನಿರೂಪಿಸಿದರು. ಶಿಕ್ಷಕರಾದ ಪುರುಷೋತ್ತಮ್, ಇಂದಿರಾ, ರಮಿತಾ, ಮೀನಾಕ್ಷಿ, ದಮಯಂತಿ, ಮೋನಿಷಾ, ಕಚೇರಿ ನೌಕರೆ ಹೇಮಾವತಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net