ಹರ್ತಿ ಬಸವೇಶ್ವರ ಜಾತ್ರಾ ಮಹೋತ್ಸವ 11ರಂದು

4mul1- Jatre
Published on

ಮುಳಗುಂದ: ಸಮೀಪದ ಹರ್ತಿ ಗ್ರಾಮದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವವು ಸೆ. 11ರಂದು ಅದ್ದೂರಿಯಿಂದ ಜರುಗಲಿದೆ.


ಜಾತ್ರೆ ಅಂಗವಾಗಿ ಸೆ. 7ರಂದು ಬೆಳಗ್ಗೆ 9 ಗಂಟೆಗೆ ರಥದ ಕಳಸಾರೋಹಣ, ರಾತ್ರಿ 8.30ಕ್ಕೆ ಸಲ್ಲುವ ಗೋಧೋಳಿ ಲಗ್ನದ ಶುಭಮೂಹೂರ್ತದಲ್ಲಿ ಶ್ರೀ ಪಾರ್ವತಿ- ಪರಮೇಶ್ವರ ದೇವರ ವಿವಾಹ ಸಮಾರಂಭ ನೆರವೇರಲಿದೆ.


ಸೆ. 11ರಂದು ಬೆಳಗ್ಗೆ 7 ಗಂಟೆಗೆ ಬಸವಣ್ಣ ದೇವರಿಗೆ ಅಭಿಷೇಕ ಹಾಗೂ ಅರ್ಚನೆ ಕಾರ್ಯಕ್ರಮ ನಂತರ ಸಾರ್ವಜನಿಕರಿಗೆ ದರ್ಶನ ಹಾಗೂ ಸೇವಾ ಕಾರ್ಯ, ನಂತರ 10 ಗಂಟೆಗೆ ವೀರಭದ್ರದೇವರ ಅಗ್ನಿಪ್ರವೇಶ ಕಾರ್ಯಕ್ರಮ ನಡೆಯಲಿದೆ. ನಂತರ ಹೊಸಳ್ಳಿಯ ಅಭಿನವ ಬೂದೀಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ಮಹಾದಾಸೋಹ. ಸಂಜೆ 4 ಗಂಟೆಗೆ ಗ್ರಾಮದೇವತೆಗೆ ಉಡಿ ತುಂಬುವ ಹಾಗೂ ಕಾಯಿ ಕರ್ಪರದ ಸೇವಾ ಕಾರ್ಯ ನಡೆಯಲಿದೆ.
ಸೆ. 11ರಂದು ಭಜನೆ, ಜಾಂಜ್ ಮೇಳ, ಕರಡಿ ಮಜಲು ಮೇಳಗಳೊಂದಿಗೆ ಸಂಜೆ 5 ಗಂಟೆಗೆ ಬಸವಣ್ಣ ದೇವರ ಮಹಾರಥೋತ್ಸವವು ನಂದಿ ಧ್ವಜ ಪಲ್ಲಕ್ಕಿ ಮೆರವಣಿಗೆಯೊಂದಿಗೆ ಜರುಗುವುದು.


ಸೆ. 12ರಂದು ಲಘುರಥೋತ್ಸವ (ಕಡುಬಿನ ಕಾಳಗ) ವು ಸಕಲ ವಾದ್ಯ ವೈಭವಗಳೊಂದಿಗೆ ನೆರವೇರಲಿದೆ ಎಂದು ದೇವಸ್ಥಾನ ಟ್ರಸ್ಟ್ ಕಮೀಟಿ ಕಾರ್ಯದರ್ಶಿ ಬಿ.ಟಿ. ಸೋಮರಡ್ಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net