ಹರ್ತಟ್ಟು ಸಂಗೀತ ಶಾಲೆ ವಾರ್ಷಿಕೋತ್ಸವ

harthattu
ಕಾರಂತ ಥೀಮ್ ಪಾರ್ಕ್‌ನಲ್ಲಿ ನಡೆದ ಛಾಯಾ ತರಂಗಿಣಿ ಸಂಗೀತ ಶಾಲೆ ವಾರ್ಷಿಕೋತ್ಸವವನ್ನು ಗೀತಾ ಎ. ಕುಂದರ್ ಉದ್ಘಾಟಿಸಿದರು. ಭಾರತಿ ವಿ.ಮಯ್ಯ, ಭಾಗ್ಯೇಶ್ವರಿ ಮಯ್ಯ ಮತ್ತಿತರರು ಇದ್ದರು.
Published on

ಕೋಟ: ಗಿಳಿಯಾರು ಹರ್ತಟ್ಟು ಕಾರಂತ ಥೀಮ್ ಪಾರ್ಕ್ ಛಾಯಾ ತರಂಗಿಣಿ ಸಂಗೀತ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಶನಿವಾರ ನಡೆಯಿತು. ಸ್ನೇಹಕೂಟದ ಸಂಚಾಲಕಿ ಭಾರತಿ ವಿ.ಮಯ್ಯ ಶುಭಹಾರೈಸಿದರು. ಕೋಟ ಮಣೂರು ಗೀತಾನಂದ ಫೌಂಡೇಶನ್ ನಿರ್ದೇಶಕಿ ಗೀತಾ ಎ.ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಭಾಗ್ಯೇಶ್ವರಿ ಮಯ್ಯ ಅವರ ನಿರ್ದೇಶನದಲ್ಲಿ ಮಕ್ಕಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಹಾರ್ಮೋನಿಯಂನಲ್ಲಿ ಭಾರ್ಗವ ಜಿ.ಮಯ್ಯ, ವಯಲಿನ್‌ನಲ್ಲಿ ವಿಧಾತ್ರಿ ಜಿ.ಮಯ್ಯ, ಮೃದಂಗದಲ್ಲಿ ಗೋಪಾಲ ಜಿ. ಮಯ್ಯ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net