ಸಿಬ್ಬಂದಿ ಕಾರ್ಯದಕ್ಷತೆಯಿಂದ ಸಂಸ್ಥೆ ಬೆಳವಣಿಗೆ : ಡಿ.ಹರ್ಷೇಂದ್ರ ಕುಮಾರ್

co-operative society
ಹಳೆಯಂಗಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ಅವರನ್ನು ಎಚ್.ವಸಂತ್ ಬರ್ನಾಡ್ ಗೌರವಿಸಿದರು. ಪ್ರಮುಖರಾದ ಸುದರ್ಶನ್, ಅಬ್ದುಲ್ ಅಜೀಜ್, ಧರ್ಮಾನಂದ ಶೆಟ್ಟಿಗಾರ್ ಮೊದಲಾದವರಿದ್ದರು.
Published on

ಹಳೆಯಂಗಡಿ: ಸಂಸ್ಥೆಯನ್ನು ಆಡಳಿತ ವರ್ಗ ನಿರ್ವಹಿಸಿದರೆ, ಸಿಬ್ಬಂದಿಯ ಪ್ರಾಮಾಣಿಕತೆ ಮತ್ತು ಕಾರ್ಯದಕ್ಷತೆ ಸಂಸ್ಥೆಯ ಬೆಳವಣಿಗೆಯಲ್ಲಿ ಮಹತ್ತರವಾದ ಪಾತ್ರ ವಹಿಸುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ಹೇಳಿದರು.

ಹಳೆಯಂಗಡಿಯಲ್ಲಿ ಸೋಮವಾರ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಪ್ರಧಾನ ಕಚೇರಿಗೆ ಭೇಟಿ ನೀಡಿ ಶುಭ ಹಾರೈಸಿದರು.
ಸೊಸೈಟಿಯ ಪರವಾಗಿ ಅಧ್ಯಕ್ಷ ಎಚ್.ವಸಂತ್ ಬರ್ನಾಡ್ ಅವರು ಡಿ.ಹರ್ಷೇಂದ್ರ ಕುಮಾರ್ ಅವರನ್ನು ಗೌರವಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ವಂದಿಸಿದರು. ಹಳೆಯಂಗಡಿ ಗ್ರಾಪಂ ಸದಸ್ಯ ಅಬ್ದುಲ್ ಅಜೀಜ್, ಸಮಾಜ ಸೇವಕ ಧರ್ಮಾನಂದ ಶೆಟ್ಟಿಗಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net