ಮಂಗಳೂರಿನ ಶಿಕ್ಷಕಿ ಹರ್ಷಲ್ ಸ್ಮಿತಾ ಅವರಿಗೆ ಅಂತರಾಷ್ಟ್ರೀಯ ಐಕಾನ್ ಪ್ರಶಸ್ತಿ

harshal smitha
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮಲ್ಲಿ ಮಂಗಳೂರಿನ ದೈಹಿಕ ಶಿಕ್ಷಣ ಶಿಕ್ಷಕಿ ಹರ್ಷಲ್ ಸ್ಮಿತಾ ಅವರಿಗೆ ಅಂತರಾಷ್ಟ್ರೀಯ ಐಕಾನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Published on

ಮಂಗಳೂರು: ಇಂಟರ್‌ನ್ಯಾಷನಲ್ ಅಚಿವರ್ಸ್‌ ಕೌನ್ಸಿಲ್ ಹಾಗು ಏಷಿಯನ್ ವೇದಿಕ್ ಕಲ್ಚರ್ ಅಕಾಡಮಿ ಕೊಡಮಾಡುವ ಅಂತರಾಷ್ಟ್ರೀಯ ಐಕಾನ್ ಪ್ರಶಸ್ತಿಯನ್ನು ಮಂಗಳೂರಿನ ಬಜಾಲ್‌ನಂತೂರ್ ಸರ್ಕಾರಿ ಮಾದರಿ ಹಿರಿಯ ಪ್ರಾಧಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಹರ್ಷಲ್ ಸ್ಮಿತಾ ಅವರಿಗೆ ನೀಡಿ ಗೌರವಿಸಿದೆ.
ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಶ್ರೇಯೋಭಿವೃದ್ಧಿ, ಅತ್ಯುತ್ತಮ ಶಿಕ್ಷಣ ಕೇಂದ್ರ, ಮಾದರಿ ಸರ್ಕಾರಿ ಶಾಲೆ ರೂಪುಗೊಳ್ಳಲು ನೀಡಿದ ಕೊಡುಗೆಗಳನ್ನು ಪರಿಗಣಿಸಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net