ಗಾಂಜಾ ಸಾಕಾಣಿಕೆ ಅಪರಾಧಿಗೆ ಕಠಿಣ ಜೈಲು ಶಿಕ್ಷೆ

court
Published on

ವಿಜಯಪುರ: ಗಾಂಜಾ ಸಾಕಾಣಿಕೆ ಮಾಡುತ್ತಿದ್ದ ಅಪರಾಧಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಇಲ್ಲಿನ ನವಬಾಗ ನಿವಾಸಿ ಸಲೀಂ ಖಾಜಾಸಾಬ ಆಲಮೇಲ (43) ಶಿಕ್ಷೆಗೆ ಗುರಿಯಾಗಿದ್ದಾನೆ. ಈತ 2018 ಫೆ.21ರಂದು ಬಾಲಕನೊಂದಿಗೆ ಮೋಟರ್ ಸೈಕಲ್ ಮೇಲೆ ಗಾಂಜಾ ತೆಗೆದುಕೊಂಡು ಜಮಖಂಡಿ ರಸ್ತೆಯಲ್ಲಿರುವ ಗಂಗನಹಳ್ಳಿ ತೋಟದ ಬಳಿ ಹೊರಟಿದ್ದಾಗ ಪೊಲೀಸರು ದಾಳಿ ನಡೆಸಿದ್ದರು. ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪಿಎಸ್‌ಐ ಆರೀಫ್ ಎಂ.ಮುಶಾಪುರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಾಜಿ ಅನಂತ ನಲವಡೆ ಸಾಕ್ಷಿ ಪುರಾವೆಗಳನ್ನು ಅವಲೋಕಿಸಿ ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಎಸ್.ಎಚ್. ಹಕೀಮ್ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net