ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿಗೆ 3ನೇ ಸ್ಥಾನ

harapanahalli-sslc-topers
Published on


ಹರಪನಹಳ್ಳಿ: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಿಗೆ ಶೇ. 91.26 ಫಲಿತಾಂಶ ಬಂದಿದ್ದು, ಜಿಲ್ಲೆಗೆ 3ನೇ ಸ್ಥಾನ ಪಡೆದಿದೆ.

3,732 ವಿದ್ಯಾರ್ಥಿಗಳು ತೇರ್ಗಡೆ

4,089 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 3,732 ವಿದ್ಯಾರ್ಥಿಗಳು ತೇರ್ಗಡೆಯಾಗಿರುತ್ತಾರೆ. 2,026 ಬಾಲಕರಲ್ಲಿ 1,811, ಮತ್ತು 2,063 ಬಾಲಕಿಯರಲ್ಲಿ 1,921 ಜನ ಉತ್ತೀರ್ಣರಾಗಿರುತ್ತಾರೆ.

ಪಟ್ಟಣದ ಕೆಸಿಎ ಆಂಗ್ಲ ಮಾಧ್ಯಮ ಶಾಲೆಯ ಬಸವರಾಜ ಕುಂಬಾರ್ 614 ಅಂಕಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದರೆ, ವಿವಿಎಸ್ ಪ್ರೌಢಶಾಲೆ ತನ್ಮಯಿ ಕೆ.ಐ ಹಾಗೂ ಆದರ್ಶ ವಿದ್ಯಾಲಯ ಅನಂತನಹಳ್ಳಿ ಎಸ್.ಎಂ.ರಶ್ಮಿತ 612 ಅಂಕಗಳಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಎಂ.ಬಿ.ರೆಹಾನ್ ಮಲ್ಲಿಕ್ 611 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net