ಸಾವಯವ ಕೃಷಿಗೆ ರೈತರು ಒತ್ತು ನೀಡಲಿ

M.P. LATHA
Published on

ಹರಪನಹಳ್ಳಿ: ಅನ್ನದಾತರ ಬದುಕು ಹಸನಾಗಬೇಕಾದರೆ ಸಾವಯವ ಕೃಷಿ ಪದ್ಧತಿಗೆ ರೈತರು ಹೆಚ್ಚಿನ ಒತ್ತು ನೀಡಬೇಕು ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ ಕೃಷಿ ಕಚೇರಿ ಆವರಣದಲ್ಲಿ ಸೋಮವಾರ ರಿಯಾಯಿತಿ ದರದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸಿ ಮಾತನಾಡಿದರು. ಕೊಟ್ಟಿಗೆ ಗೊಬ್ಬರ ಬಳಸಿ ರಾಸಾಯನಿಕ ಮುಕ್ತ ಫಸಲು ಪಡೆಯಬೇಕು. ಸರ್ಕಾರ ನೀಡುತ್ತಿರುವ ಸಹಾಯಧನದ ಬೀಜಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.

ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಗೊಂದಿ ಮಾತನಾಡಿ, ರೈತರು ದಾಖಲೆಗಳನ್ನು ನೀಡಿ ಸಹಾಯ ಧನದ ಉಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಪುರಸಭೆ ಸದಸ್ಯರಾದ ಎಂ.ವಿ.ಅಂಜಿನಪ್ಪ, ಗೊಂಗಡಿ ನಾಗರಾಜ, ಉದ್ದಾರ ಗಣೇಶ, ಲಾಟಿ ದಾದಾಪೀರ, ಮುಖಂಡರಾದ ಬಿ.ಕೆ.ಪ್ರಕಾಶ, ವೈ.ಕೆ.ಬಿ. ದುರುಗಪ್ಪ, ಎಲ್.ಮಂಜನಾಯ್ಕ, ತೆಲಿಗಿ ಉಮಾಕಾಂತ, ಮಹಾಂತೇಶನಾಯ್ಕ, ಮತ್ತೂರು ಬಸವರಾಜ, ಎಚ್.ಚಂದ್ರಪ್ಪ, ಬಾಣದ ಅಂಜಿನಪ್ಪ, ವಸಂತಪ್ಪ, ಶಿವರಾಜ, ಸಾಸ್ವಿಹಳ್ಳಿ ನಾಗರಾಜ, ಓ.ರಾಮಪ್ಪ, ಪಿ.ರಾಮಪ್ಪ, ಕೆ. ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net