ರಾಚೇನಮಡು ಗ್ರಾಮದ ಜೀವನ್ ಮೃತ ದುರ್ದೈವಿಯಾಗಿದ್ದು, ತಲಘಟ್ಟಪುರದಿಂದ ಟೆಂಪೋವೊಂದು ಕಬ್ಬಿಣ ತುಂಬಿಕೊಂಡು ಕಗ್ಗಲೀಪುರದ ಕಡೆಗೆ ಬರುವಾಗ ಅಂಗಡಿಗೆ ನುಗ್ಗಿದ್ದರಿಂದ ಅಲ್ಲಿಯೇ ಇದ್ದ ಬಾಲಕ ಸಾವನ್ನಪ್ಪಿದ್ದಾನೆ.
407 ವಾಹನ ಚಾಲಕನಿಗೆ ಗಂಭೀರಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹವನ್ನು ಶವ ಪರೀಕೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಕಗ್ಗಲೀಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.