ಅಧ್ಯಕ್ಷರಾಗಿ ಹರೀಶ್ ಅವಿರೋಧ ಆಯ್ಕೆ

IMG-20240719-WA0224
ತಾಲೂಕಿನ ಸಂತೇಬಾಚಹಳ್ಳಿಯ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅವಿರೋಧವಾಗಿ ಹರೀಶ್ ಅಧ್ಯಕ್ಷರಾಗಿ ಶುಕ್ರವಾರ ಆಯ್ಕೆಯಾದರು.
Published on

ಕೆ.ಆರ್.ಪೇಟೆ: ತಾಲೂಕಿನ ಸಂತೇಬಾಚಹಳ್ಳಿಯ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಹರೀಶ್ ಅವಿರೋಧ ಆಯ್ಕೆಯಾದರು.

ಸಣ್ಣಪ್ಪಶೆಟ್ಟಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಹರೀಶ್ ಅವರನ್ನು ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದ ಕಾರಣಕ್ಕೆ ಚುನಾವಣಾಧಿಕಾರಿ, ತಾಲೂಕಿನ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಎಚ್.ಬಿ.ಭರತ್‌ಕುಮಾರ್ ಅವಿರೋಧ ಆಯ್ಕೆ ಘೋಷಿಸಿದರು.

ಉಪಾಧ್ಯಕ್ಷ ಎಚ್.ಎಸ್.ಸುರೇಶ್, ಸದಸ್ಯರಾದ ಸಣ್ಣಪ್ಪ, ಎಚ್.ಎಸ್.ಉದಯಕುಮಾರ್, ಎಸ್.ಎಚ್.ಕೃಷ್ಣ, ಎಚ್.ಎನ್. ಮಹಾದೇವಪ್ಪ, ಎಸ್.ಬಿ.ಚಂದ್ರಶೇಖರ್, ಎಚ್.ಎನ್.ಕುಮಾರಸ್ವಾಮಿ, ಬಿ.ಮೋಹನ್, ಸೋಮಯ್ಯ ಗ್ರಾಮದ ಪ್ರಮುಖರಾದ ವೆಂಕಟೇಶಯ್ಯ ಸೇರಿ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net