ಹರಿಪ್ರಸಾದ್ ಕರಾಟೆಯಲ್ಲಿ ರಾಜ್ಯಮಟ್ಟಕ್ಕೆ

Kdb_Karate
Published on

ಕಡಬ: ಇಲ್ಲಿನ ಸರಸ್ವತಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಹರಿಪ್ರಸಾದ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಜಿಲ್ಲಾಮಟ್ಟದ 17ರ ವಯೋಮಾನದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕರಾಟೆ ಶಿಕ್ಷಕ ಯಾದವ ಬೀರಂತಡ್ಕ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಲಕ್ಷ್ಮೀಶ ಗೌಡ ಆರಿಗ ತರಬೇತಿ ನೀಡಿದ್ದಾರೆ. ಕಡಬ ವಿದ್ಯಾನಗರ ನಿವಾಸಿ ವನಜಾ ಅವರ ಪುತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net