ಕುಂಜರಕಾನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ

navarathri
Published on

ಕಾಸರಗೋಡು: ಎಡನೀರು ಸಮೀಪದ ಕುಂಜರಕಾನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಅ.3ರಿಂದ 13ರವರೆಗೆ ಜರುಗಲಿದೆ. ಪ್ರತಿದಿನ ಬೆಳಗ್ಗೆ 7ಕ್ಕೆ ಗಣಪತಿ ಹವನ, 8ಕ್ಕೆ ಉಷಃಪೂಜೆ, ಶ್ರೀ ದುರ್ಗಾಸಪ್ತತೀ ಪಾರಾಯಣ, ಬೆಳಗ್ಗೆ 10 ಹಾಗೂ ಸಂಜೆ 6.30ಕ್ಕೆ ಭಜನೆ ನಡೆಯುವುದು. ಅ.4, 8 ಹಾಗೂ 11ರಂದು ಬೆಳಗ್ಗೆ 8.30ಕ್ಕೆ ತುಲಾಭಾರ ಸೇವೆ, 12ರಂದು ಬೆಳಗ್ಗೆ 7ಕ್ಕೆ ವಾಹನ ಪೂಜೆ, 13ರಂದು ಬೆಳಗ್ಗೆ 8ರಿಂದ ವಿದ್ಯಾರಂಭ, ರಾತ್ರಿ ಶ್ರೀದೇವರಿಗೆ ಪಾಲಕ್ಕಿ ಉತ್ಸವ, ಅಷ್ಟಾವಧಾನ ಸೇವೆ ನಡೆಯುವುದು. ವಿವಿಧ ದಿನಗಳಲ್ಲಿ ಸಾಂಸ್ಕೃತಿಕ ವೈವಿಧ್ಯ ನಡೆಯುವುದು.

ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರ

ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ಅ.3ರಿಂದ 12ರವರೆಗೆ ನವರಾತ್ರಿ ಮಹೋತ್ಸವ ನಡೆಯುವುದು. 3ರಂದು ಬೆಳಗ್ಗೆ ಗಣಪತಿ ಹವನದೊಂದಿಗೆ ನವರಾತ್ರಿ ಪೂಜೆ ಆರಂಭಗೊಳ್ಳುವುದು. ಶುದ್ಧಿಕಲಶ, ಕಲಶ ಪ್ರತಿಷ್ಠಾಪನೆ, ಹುತ್ತರಿ ಕದಿರು ತುಂಬಿಸುವ ಕಾರ್ಯಕ್ರಮ ನಡೆಯುವುದು. ಅ.4ರವರೆಗೆ ಬೆಳಗ್ಗೆ 11 ಹಾಗೂ ಸಂಜೆ 7.30ಕ್ಕೆ ಭಜನೆ, 9ರಂದು ಆಂಜನೇಯ ಪೂಜೆ, ದುರ್ಗಾ ನಮಸ್ಕಾರ ಪೂಜೆ, 11ರಂದು ಬೆಳಗ್ಗೆ 9ಕ್ಕೆ ಚಂಡಿಕಾ ಹೋಮ, 11.30ಕ್ಕೆ ಪೂರ್ಣಾಹುತಿ, ರಾತ್ರಿ 10.30ಕ್ಕೆ ಶ್ರೀ ಮೂಕಾಂಬಿಕಾ ಅಲಂಕಾರಪೂಜೆ, ದೊಂದಿ ಸೇವೆ, ಶಕ್ತಿಪೂಜೆ, 12ರಂದು ಬೆಳಗ್ಗೆ ವಿದ್ಯಾರಂಭ ನಡೆಯುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net