ಹರಿಹರದಲ್ಲಿ ವಿಶ್ವ ಸೊಳ್ಳೆ ದಿನಾಚರಣೆ: ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

Hrr Shale
Published on

ಹರಿಹರ: ನಗರದ ಎಂಕೆಇಟಿ ಪ್ರೌಢಶಾಲೆಯಲ್ಲಿ ವಿಶ್ವ ಸೊಳ್ಳೆ ದಿನದ ಪ್ರಯುಕ್ತ ತಾಲೂಕು ಆರೋಗ್ಯ ಇಲಾಖೆ ಆ. 20ರಂದು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಮಂಗಳವಾರ ಬಹುಮಾನ ವಿತರಿಸಲಾಯಿತು.

ಪ್ರೌಢಶಾಲಾ ವಿಭಾಗದಲ್ಲಿ ಗುತ್ತೂರು ಸರ್ಕಾರಿ ಪ್ರೌಢಶಾಲೆಯ ಕೆ.ನಂದಿನಿ ಪ್ರಥಮ, ಎಂಕೆಇಟಿ ಪ್ರೌಢಶಾಲೆಯ ಸಮುದ್ಯತಾ ದ್ವಿತೀಯ, ರಾಜನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಎನ್. ಪ್ರಶಾಂತ್ ತೃತೀಯ ಬಹುಮಾನ ಪಡೆದರು.

ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಎಂಕೆಇಟಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಟಿ.ಪ್ರತೀಕ ಪ್ರಥಮ, ಇದೇ ಶಾಲೆಯ ಲಿಖಿತ್.ವಿ.ಭಟ್ ದ್ವಿತೀಯ, ಹರ್ಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಿ.ರೇಣುಕಾ ಮತ್ತು ಯಾಸ್ಮೀನ್ ತೃತೀಯ ಬಹುಮಾನ ಪಡೆದರು.

ತಾಲೂಕು ಆರೋಗ್ಯ ಅಧಿಕಾರಿ ಡಾ.ಚಂದ್ರಮೋಹನ್, ಎಂಕೆಇಟಿ ಪ್ರೌಢಶಾಲೆ ಮುಖ್ಯಶಿಕ್ಷಕ ಡಿ.ಟಿ.ತಿಪ್ಪಣ್ಣರಾಜ್, ಸಂಪನ್ಮೂಲ ವ್ಯಕ್ತಿ ಶ್ರೀಧರ್ ಮಯ್ಯ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಉಮ್ಮಣ್ಣ, ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಕಾರ್ಯದರ್ಶಿ ಎಚ್.ಸಿ.ಕೀರ್ತಿಕುಮಾರ್, ಶಿಕ್ಷಕ ಲೋಕೇಶಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net