ಸೆ.೩೦ ರಿಂದ ಕೋಟೆನಗರಿಯಲ್ಲಿ ಹರಿದಾಸ ಹಬ್ಬ

bkt-28-2
ಬಾಗಲಕೋಟೆ ನಗರದ ಪಂಕ್ವಾನ್ ಹೋಟೆಲ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಸಮಿತಿ ಮುಖಂಡ ನಾರಾಯಣ ದೇಸಾಯಿ, ಭರತ ಆಲೂರ, ಕಿರಣ ಕುಲಕರ್ಣಿ, ಉಮೇಶ ಪಡಸಲಗಿ, ನವೀನ ದೇಶಪಾಂಡೆ, ವಿಷ್ಣು ಜೋಶಿ, ಸಂಕಲ್ಪ ದೇಸಾಯಿ, ಸುನೀಲ ಮಠ ಭಿತ್ತಿಪತ್ರ ಬಿಡುಗಡೆಗೊಳಿಸಿದರು.
Published on

ಬಾಗಲಕೋಟೆ: ಶ್ರೀರಂಗವಿಠ್ಠಲ ಭಜನಾ ಮಂಡಳಿ ನೇತೃತ್ವದಲ್ಲಿ ನಂಜನಗೂಡು ರಾಘವೇಂದ್ರ ಸ್ವಾಮಿಗಳವರ ಮಠದ ಸಹಯೋಗದಲ್ಲಿ ಸೆ.೩೦ ರಿಂದ ಅ.೨ ರ ವರೆಗೆ ಕಿಲ್ಲಾದಲ್ಲಿ ಹರಿದಾಸ ಹಬ್ಬ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಮುಖಂಡ ನಾರಾಯಣ ದೇಸಾಯಿ ಹೇಳಿದರು.

ನಗರದ ಪಂಕ್ವಾನ್ ಹೋಟೆಲ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.೩೦ ರಂದು ಸಂಜೆ ೪ ಗಂಟೆಗೆ ಬಾಗಲಕೋಟೆ ಮಹಿಳಾ ಭಜನಾ ಮಂಡಳಿಗಳಿಂದ ಭಜನೆ, ೫.೩೦ ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಬಿಂದುಮಾಧವಾಚಾರ್ಯ ನಾಗ ಸಂಪಗಿ ಅವರು ಉಪನ್ಯಾಸ ನೀಡಲಿದ್ದಾರೆ. ಕೃಷ್ಣರಾಜ ಭಟ್ ಕುತ್ಪಾಡಿ ಅವರು ಮಹಾಲಯದ ಮಹತಿ ಕುರಿತು ಪ್ರವಚನ ನೀಡಲಿದ್ದಾರೆ. ೭ ಗಂಟೆಗೆ ಜಯತೀರ್ಥ ತಾಸಗಾಂವ, ಅನಂತರಾಜ ಮಿಸ್ತ್ರಿ, ದಿವ್ಯಾ ಗಿರಿಧರ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದರು.

ಸೆ.೧ ರಂದು ಸಂಜೆ ೪ ಗಂಟೆಗೆ ವಿದ್ಯಾಗಿರಿ ಮಹಿಳಾ ಭಜನಾ ಮಂಡಳಿಗಳಿಂದ ಭಜನೆ, ೫.೩೦ ಗಂಟೆಗೆ ಭೀಮ ಸೇನಾಚಾರ್ಯ ಪಾಂಡುರಂಗಿ ಅವರ ಉಪನ್ಯಾಸ, ನರಹರಿಆಚಾರ್ಯ ಮುತ್ತಗಿ ಹರಿದಾಸರು ಕಂಡ ರಂಗ ಕುರಿತು ಪ್ರವಚನ ನೀಡಲಿದ್ದಾರೆ. ೭ ಗಂಟೆಗೆ ಧಾರವಾಡದ ಟೂರಿಂಗ್ ಟಾಕೀಜ ತಂಡದಿಂದ ಶ್ರದ್ಧಾ ಎನ್ನುವ ಪಕ್ಷಮಾಸದ ವಿಶೇಷ ಕಿರು ನಾಟಕ, ೮ ಗಂಟೆಗೆ ಅನಂತ ಕುಲಕರ್ಣಿ, ಶೇಷಗಿರಿದಾಸ ಅವರಿಂದ ದಾಸವಾಣಿ ಜುಗಲ್‌ಬಂಧಿ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.

ಸೆ.೨ ರಂದು ಸಂಜೆ ೪ ಗಂಟೆಗೆ ನವನಗರದ ಮಹಿಳಾ ಭಜನಾ ಮಂಡಳಿಗಳಿಂದ ಭಜನೆ, ೫.೩೦ ಗಂಟೆಗೆ ವಿಜಯೀಂದ್ರಾಚಾರ್ಯ ಮಣ್ಣೂರ ಅವರಿಂದ ವಿಶೇಷ ಪ್ರವಚನ, ವೇಣುಗೋಪಾಲಾಚಾರ್ಯ ಅಗ್ನಿಹೋತ್ರಿ ಅವರಿಂದ ಹರಿದಾ ಸರ ಜೀವನದಲ್ಲಿ ಶ್ರಾದ್ಧದ ಚಿಂತನೆ ಕುರಿತು ಉಪನ್ಯಾಸ ನೀಡುವರು. ೭ ಗಂಟೆಗೆ ಪ್ರಿಯಾಂಕ ಕುಲಕರ್ಣಿ, ಅನಘಾ ದೇಶಪಾಂಡೆ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದ್ದು, ೮ ಗಂಟೆಗೆ ಮೈಸೂರು ರಾಮ ಚಂದ್ರಾಚಾರ್ಯ ದಾಸದರ್ಶನ, ಸಂಗೀತ ಕಾರ್ಯಕ್ರಮ ನೀಡಲಿದ್ದಾರೆಂದರು.

ಸೆ.೩೦ ರಂದು ಚಲನಚಿತ್ರ ನಿರ್ದೇಶಕರಾದ ಮಧುಸೂದನ ಹವಾಲ್ದಾರ, ಅ.೧ ರಂದು ನಿವೃತ್ತ ಉಪನ್ಯಾಸಕಿ ಪ್ರಮೀಳಾ ಪುರೋಹಿತ, ಸೆ.೨ ರಂದು ಚಲನಚಿತ್ರ ನಿರ್ದೇಶಕ ಹಯವದನ ಕುಲಕರ್ಣಿ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇನ್ನೂ ಮೂರು ದಿನದ ಸಂಗೀತ ಕಾರ್ಯಕ್ರಮಕ್ಕೆ ಕೇಶವ ಜೋಶಿ, ವಿಷ್ಣು ಜೋಶಿ, ಪ್ರವೀಣ ಮಂಕಣಿ, ಕುಮಾರ ಜನಕ್ ಭಜಂತ್ರಿ ಅವರ ತಬಲಾ, ಶ್ರೀಪಾದದಾಸ ರಾಯಚೂರ, ಶ್ರೀನಿವಾಸ ಕುಲಕರ್ಣಿ ಅವರು ಹಾರ್ಮೋನಿಯಂ, ಶಿವಲಿಂಗಪ್ಪ ರಾಜಾಪುರ ಕೊಳಲು ಹಾಗೂ ಸಂಕಲ್ಪ ದೇಸಾಯಿ, ನರಸಿಂಗ ಮನಗೂಳಿ, ಪ್ರಭಂಜನ ಕುಲಕರ್ಣಿ ತಾಳ ಸಾಥ್ ನೀಡಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಭರತ ಆಲೂರ, ಕಿರಣ ಕುಲಕರ್ಣಿ, ಉಮೇಶ ಪಡಸಲಗಿ, ನವೀನ ದೇಶಪಾಂಡೆ, ವಿಷ್ಣು ಜೋಶಿ, ಸಂಕಲ್ಪ ದೇಸಾಯಿ, ಸುನೀಲ ಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net