ಹರಳೂರು ಶ್ರೀ ವೀರಭದ್ರಸ್ವಾಮಿ ಜಾತ್ರೆ ಮುಂದೂಡಿಕೆ

Haraluru_Veerabhadra11
Published on

ತುಮಕೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಹರಳೂರಿನ ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವವನ್ನು ಮುಂದೂಡಲಾಗಿದೆ.

ಈ ಜಾತ್ರಾ ಮಹೋತ್ಸವವು ಪೂರ್ವ ನಿಗದಿಯಂತೆ ಏ. 23 ರಿಂದ ಪ್ರಾರಂಭವಾಗಿ ಏ. 29 ರವರೆಗೆ ನಡೆಯಬೇಕಿತ್ತು. ಆದರೆ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವವನ್ನು ಒಂದು ವಾರಗಳ ಕಾಲ ಮುಂದೂಡಿದ್ದು, ಏ.30 ರಿಂದ ಮೇ 6ರ ವರೆಗೆ ಜಾತ್ರಾ ಮಹೋತ್ಸವ ನಡೆಸಲು ತೀರ್ಮಾನಿಸಲಾಗಿದೆ ಎಂದು ಶ್ರೀ ವೀರಭದ್ರ ಸ್ವಾಮಿ ಸೇವಾ ಸಮಿತಿ (ರಿ) ಹಾಗೂ ಹರಳೂರು ಶ್ರೀ ವೀರಭದ್ರೇಶ್ವರ ದಾಸೋಹ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net