ಹರದನಹಳ್ಳಿ ವಿಜಯ್‌ಕುಮಾರ್ ಸಮಾಜ ಸೇವೆ ಅಪಾರ

IMG-20250626-WA0154
Published on

ಸಾಲಿಗ್ರಾಮ: ಅಧಿಕಾರದ ಆಸೆ ಇಲ್ಲದೆ ಸ್ವಂತ ಹಣದಲ್ಲಿ ಸಮಾಜ ಸೇವೆ ಮಾಡುವ ಮೂಲಕ ಬಡವರ ಪರ ನಿಲ್ಲುವ ಸರಳ ಸಜ್ಜನಿಕೆಯ ವ್ಯಕ್ತಿಯಾಗಿ ಮುಡಾ ಮಾಜಿ ಅಧ್ಯಕ್ಷ ಹರದನಹಳ್ಳಿ ವಿಜಯ್‌ಕುಮಾರ್ ಗುರುತಿಸಿಕೊಂಡಿದ್ದಾರೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ ದೇವೇಗೌಡ ತಿಳಿಸಿದರು.

ಸಾಲಿಗ್ರಾಮ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ವಿಜಯ್‌ಕುಮಾರ್ ಅವರ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಸಮಾಜ ಸೇವೆ ಮಾಡುವ ಮೂಲಕ ಆಚರಿಸಬೇಕು ಎಂದು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಜಯಕುಮಾರ್ ಅವರಿಗೆ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸಾಕಷ್ಟು ಉನ್ನತ ಸ್ಥಾನಮಾನಗಳು ಹುಡುಕಿಕೊಂಡು ಬಂದರೂ ಅದಕ್ಕೆಲ್ಲ ಆಸೆ ಪಡದ ಸರಳ ಸಜ್ಜನಿಕೆಯ ವ್ಯಕ್ತಿ ವಿಜಯಕುಮಾರ್. ರಾಜಕೀಯದಲ್ಲಿ ಉನ್ನತ ಸ್ಥಾನಮಾನ ಪಡೆಯಬೇಕು ಎಂದು ಬಯಸಿದರೆ ಈ ಕ್ಷಣದಲ್ಲೂ ದೊಡ್ಡ ಮಟ್ಟದ ಭವಿಷ್ಯ ಕಾದಿದೆ. ಇಂತಹ ಸಮಾಜ ಸೇವೆ ಮಾಡುವ ಸೇವಕ ಎಲ್ಲ ತಾಲೂಕಿನಲ್ಲೂ ಸಿಗಲ್ಲ. ಹಾಗಾಗಿ ಇಂತಹ ಸರಳ ವ್ಯಕ್ತಿತ್ವ ಇರುವ ವಿಜಯಕುಮಾರ್ ಅವರ 51ನೇ ವರ್ಷದ ಹುಟ್ಟುಹಬ್ಬ ಆಚರಣೆ ಜುಲೈ 16ರಂದು ನಡೆಯಲಿದೆ. ಅಂದು ಮಹಿಳೆಯರಿಗೆ ಸೀಮಂತ, ಬಡ ವಿದ್ಯಾರ್ಥಿಗಳಿಗೆ ಮತ್ತು ಅಂಗವಿಕಲರಿಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ 50ಕ್ಕೂ ಹೆಚ್ಚು ಮಠಾಧೀಶರ ಆಶೀರ್ವಾದದೊಂದಿಗೆ ಈ ಹುಟ್ಟುಹಬ್ಬವನ್ನು ಆಚರಿಸಲು ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.

ರಾಜ್ಯದ ವಿವಿಧ ಪಕ್ಷಗಳ ಪ್ರಮುಖ ರಾಜಕಾರಣಿಗಳು ಉನ್ನತ ಉದ್ಯಮಿಗಳು ಸಮಾಜ ಸೇವಕರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದು, ಎಲ್ಲ ಅಭಿಮಾನಿಗಳಿಗೆ ಫಲಾಹಾರದ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಹಕಾರ ಕ್ಷೇತ್ರಕ್ಕೂ ಕಾಲಿಟ್ಟ ರಾಜಕಾರಣ:

ಸಹಕಾರ ಕ್ಷೇತ್ರಗಳ ಮೇಲೆ ಇತ್ತೀಚೆಗೆ ರಾಜಕಾರಣಿಗಳ ಕಣ್ಣು ಬಿದ್ದಿದ್ದು, ಇದರಲ್ಲೂ ರಾಜಕಾರಣ ಮಾಡಲು ಮುಂದಾಗುತ್ತಿರುವುದು ಕ್ಷೇತ್ರಗಳು ಅಧೋಗತಿಗೆ ತಲುಪುವ ಆತಂಕ ಇದೆ. ಸಹಕಾರ ಕ್ಷೇತ್ರಗಳು ಅಭಿವೃದ್ಧಿ ಕಾಣದ ಸ್ಥಿತಿಗೆ ತಿರುಗುತ್ತಿರುವುದು ಬಹಳ ಬೇಸರವಾಗಿದೆ. ಇಲ್ಲಿ ಕೃಷಿಕರು, ಹೈನುಗಾರಿಕೆ, ತೋಟಗಾರಿಕೆ ಅಭಿವೃದ್ಧಿ ಸೇರಿದಂತೆ ಒಟ್ಟಾರೆ ರೈತರ ಅಭಿವೃದ್ಧಿಯನ್ನು ಬಯಸುವ ಪ್ರಮುಖ ಕ್ಷೇತ್ರ ಎಂದರೆ ಅದು ಸಹಕಾರ ಕ್ಷೇತ್ರ. ಇದರ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚು ಅನುದಾನ ತರುವ ಮೂಲಕ ಸಹಕಾರ ನೀಡಬೇಕಿದೆ ಎಂದರು.

ಶಾಸಕ ಹರೀಶ್‌ಗೌಡ ಸಹಕಾರ ಕ್ಷೇತ್ರಕ್ಕೆ ಬಂದ ಮೇಲೆ ಮಹಾಮಂಡಳದ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಸಹಕಾರ ಕ್ಷೇತ್ರವನ್ನು ವಿಭಿನ್ನವಾಗಿ ಅಭಿವೃದ್ಧಿ ಪಡಿಸಿದ್ದ. ಸರ್ಕಾರದಿಂದ ಕೋಟ್ಯಂತರ ಅನುದಾನ ತರುವ ಮೂಲಕ ರೈತರಿಗೆ ಮತ್ತು ಮಹಿಳೆಯರಿಗೆ ಸಹಕಾರ ಕ್ಷೇತ್ರದಲ್ಲಿ ತಮ್ಮ ಬದುಕು ಕಟ್ಟಿಕೊಳ್ಳಲು ಹೆಚ್ಚು ಆದ್ಯತೆ ನೀಡಿದ ಹೆಗ್ಗಳಿಕೆ ಅವನಿಗೆ ಸಲ್ಲುತ್ತದೆ ಎಂದರು.

ನನ್ನ ಆತ್ಮೀಯ ವಿಜಯ್‌ಕುಮಾರ್ ಅವರ ಹುಟ್ಟುಹಬ್ಬ ಆಚರಣೆ ಇರುವುದರಿಂದ ಇಲ್ಲಿಗೆ ಬಂದಿದ್ದೇನೆ. ಅದು ಬಿಟ್ಟು ಬೇರೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದರು.

ಮುಡಾ ಮಾಜಿ ಅಧ್ಯಕ್ಷ ಹರದನಹಳ್ಳಿ ವಿಜಯಕುಮಾರ್, ವೈಮುಲ್ ನಿರ್ದೇಶಕ ಎ.ಟಿ. ಸೋಮಶೇಖರ್, ಜಿಲ್ಲಾ ಪತ್ರ ಬರಹಗಾರ ರಾಜೀವ್, ಕಾಂಗ್ರೆಸ್ ಹಿರಿಯ ಕಾರ್ಯದರ್ಶಿ ನಂದೀಶ್, ಗ್ರಾಪಂ ಸದಸ್ಯ ಹೇಮಂತ್, ಪ್ರದೀಪ್, ಮಂಜುಳಾ, ಮಂಜುನಾಥ, ಟಿ.ರವಿ, ಕುಪ್ಪಳಿಸೋಮು, ದುಶಾಂತ್, ಆರ್.ತಿಮ್ಮಣ್ಣ, ಎಲ್‌ಐಸಿ ನಿಂಗಪ್ಪ, ಅನಂತ, ಸವಿತಾ ವಿಜಯ್, ಬಲರಾಮ್ ಪ್ರಸನ್ನ, ಗೋಪಾಲ್, ನಟರಾಜ್, ದೇವೇಗೌಡ, ಮುದುಗುಪ್ಪೆ ಕುಮಾರ್, ಜಿಲ್ಲಾ ಛಾಯಾಗ್ರಾಹಕರ ಸಂಘದ ಮಾಜಿ ಅಧ್ಯಕ್ಷ ಮಹೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net