ಕೇಂದ್ರದ ನಿರ್ಧಾರಕ್ಕೆ ಹರ್ಷ

Happy with the Centre's decision
Published on

ಮಹಾಲಿಂಗಪುರ : ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದ ವಿಶ್ವಕರ್ಮ ಸಮಾಜದ ಶ್ರೇಯೋಭಿವೃದ್ಧಿಗಾಗಿ 15 ಸಾವಿರ ಕೋಟಿ ರೂ. ವೆಚ್ಚದ ಕ್ರಿಯಾಯೋಜನೆ ರೂಪಿಸಿರುವ ಕೇಂದ್ರ ಸರ್ಕಾರದ ಕ್ರಮ ಸ್ವಾಗತಾರ್ಹವೆಂದು ಮಹಾಲಿಂಗಪುರ ಪಟ್ಟಣದ ವಿಶ್ವಕರ್ಮ ಸಮಾಜದ ಅಧ್ಯಕ್ಷ ಹಣಮಂತ ಬಡಿಗೇರ ಹರ್ಷ ವ್ಯಕ್ತಪಡಿಸಿದರು.

ವಿಶ್ವಕರ್ಮ ನಿಗಮ ಸ್ಥಾಪಿಸಿ ಅನುದಾನ ಮೀಸಲಿರಿಸಲು ಮೋದಿ ಸರ್ಕಾರ ತೆಗೆದುಕೊಂಡ ಕ್ರಮದ ಕುರಿತು ಚರ್ಚಿಸಲು ಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕರಕುಶಲ ಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ವಿಶ್ವಕರ್ಮರು ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತ ಬಂದಿದ್ದಾರೆ.

ಸ್ವಾತಂತ್ರ್ಯ ನಂತರವೂ ಅನೇಕ ಸರ್ಕಾರಗಳು ರಾಜ್ಯ ಮತ್ತು ಕೇಂದ್ರದಲ್ಲಿ ಬಂದು ಹೋಗಿವೆ. ಯಾವ ಸರ್ಕಾರಗಳಲ್ಲೂ ವಿಶ್ವಕರ್ಮರ ಕೆಲಸಕ್ಕೆ ಗೌರವ ಸಿಕ್ಕಿರಲಿಲ್ಲ. ಈಗ ಕೇಂದ್ರ ಸರ್ಕಾರ ನಮ್ಮನ್ನು ಗುರುತಿಸಿರುವುದು ಸ್ವಾಗತಾರ್ಹ ಎಂದರು.

ಮುಖಂಡ ಶಂಭುಲಿಂಗ ಬಡಿಗೇರ ಮಾತನಾಡಿ, ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರದಿಂದ ವಿಶ್ವಕರ್ಮ ಸಮಾಜದವರಿಗೆ ಸಂತಸವಾಗಿದೆ ಎಂದರು.

ಸಮಾಜದ ಪ್ರಮುಖರಾದ ಮಹೇಶ ಬಡಿಗೇರ, ನಾರಣಪ್ಪ ಬಟ್ಟಲ, ಡಾ.ರಮೇಶ ಪತ್ತಾರ, ಭೀಮಶಿ ಬಡಿಗೇರ, ಸದಾಶಿವ ಬಡಿಗೇರ, ಮುರಳಿ ಬಡಿಗೇರ, ಮೋನಪ್ಪ ಬಟ್ಟಲ, ಪರಪ್ಪ ಪತ್ತಾರ, ಮಹಾಲಿಂಗಪ್ಪ ಬಟ್ಟಲ, ಕುಮಾರ ಬಡಿಗೇರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net