ಛಾಯಾಚಿತ್ರ ಗ್ರಾಹಕರು ತಾಂತ್ರಿಕವಾಗಿ ಬೆಳೆಯಲಿ

Let the photo consumer grow technologically
ಗುಳೇದಗುಡ್ಡ ತಾಲೂಕು ಛಾಯಾಚಿತ್ರಗ್ರಾಹಕರ ಸಂಘದ ವತಿಯಿಂದ ಮಹಾಕೂಟದಲ್ಲಿ ವಿಶ್ವ ಛಾಯಾಚಿತ್ರಗ್ರಹಣ ಕಾರ್ಯಕ್ರಮ ನಡೆಯಿತು.
Published on

ಗುಳೇದಗುಡ್ಡ : ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಛಾಯಾಚಿತ್ರ ಗ್ರಾಹಕರು ಅಗತ್ಯಕ್ಕೆ ತಕ್ಕಂತೆ ವೃತ್ತಿಕೌಶಲ, ತಂತ್ರಗಾರಿಕೆ ಬೆಳೆಸಿಕೊಂಡು ತಾಂತ್ರಿಕವಾಗಿ ಸದೃಢರಾಗಬೇಕು.

ಬದಲಾಗುತ್ತಿರುವ ಮಾರುಕಟ್ಟೆ ಬಗ್ಗೆ ತಿಳಿದುಕೊಳ್ಳಬೇಕು. ಅಂದಾಗ ಮಾತ್ರ ಛಾಯಾಚಿತ್ರಗ್ರಾಹಕ ವೃತ್ತಿಯಲ್ಲಿ ಉಳಿದುಕೊಳ್ಳಬಹುದು ಎಂದು ಬಾಗಲಕೋಟೆಯ ಖ್ಯಾತ ಛಾಯಾಚಿತ್ರಗ್ರಾಹಕ ಸಂತೋಷ ಹಂಜಗಿ ಹೇಳಿದರು.

ಗುಳೇದಗುಡ್ಡ ತಾಲೂಕು ಛಾಯಾಚಿತ್ರ ಗ್ರಾಹಕರ ಸಂಘದ ವತಿಯಿಂದ ಸಮೀಪದ ಮಹಾಕೂಟದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಛಾಯಾಚಿತ್ರಗ್ರಹಣ ದಿನಾಚರಣೆಯಲ್ಲ್ರಿಮದಲ್ಲಿ ಅವರು ಮಾತನಾಡಿ, ಹೊಸ ಆವಿಷ್ಕಾರಗಳು ಇಂದು ಛಾಯಾಚಿತ್ರಗ್ರಾಹಕರ ಉದ್ಯೋಗವನ್ನು ಕಸಿಯುತ್ತಿದ್ದು, ಇದರಿಂದ ಪಾರಾಗಿ ನಾವು ಛಾಯಾಗ್ರಹಣ ವೃತ್ತಿಯನ್ನು ಉಳಿಸಿಕೊಳ್ಳವುದು ಅನಿವಾರ್ಯತೆ ಇದೆ ಎಂದರು.

ಸಂತೋಷ ಹಂಜಗಿ ಹಾಗೂ ಬೆಂಗಳೂರು ಸಿನಿ ಕ್ರಿಯೇಷನ್‌ನ ಸದ್ದಾಂ ಅವರು ಫೋಟೋಗ್ರಫಿ ಹಾಗೂ ವಿಡಿಯೋಗ್ರಫಿಯ ಬಗ್ಗೆ ತರಬೇತಿ ನೀಡಿದರು.
ಹಿರಿಯ ಛಾಯಾಚಿತ್ರಗ್ರಾಹಕ ವಿದ್ಯಾಧರ ಹೇಮಾದ್ರಿ, ವಿಜಯಪುರದ ಕ್ಲಿಕ್ ಪೋಟೋ ಪಾಯಿಂಟ್‌ನ ಮಾಲೀಕ ಸುನೀಲ್ ಆರ್., ಅಧ್ಯಕ್ಷತೆ ವಹಿಸಿದ್ದ ಶಿವಕುಮಾರ ರಂಜನಗಿ ಮಾತನಾಡಿದರು.
ಸಿ.ಬಿ. ಅನ್ನಂ, ಸಂಗಮೇಶ ಕೋಡಬಳಿ, ಶರಣಬಸಪ್ಪ ಜಮಖಂಡಿ, ಉಪಾಧ್ಯಕ್ಷ ಪ್ರಶಾಂತ ಉದ್ನೂರ, ಕಾರ್ಯದರ್ಶಿ ಶಿವಾನಂದ ಗೋತಗಿ, ಸಹಕಾರ್ಯದರ್ಶಿ ವಿನೋದ ಕಿತ್ತಲಿ, ಖಜಾಂಚಿ ಸುರೇಶ ವಗ್ಗಾ, ಡಿ.ಎ್. ಪವಾರ, ಶೇಖರ ಕಲಕೇರಿ, ಇಬ್ರಾಹಿಂ ಅಮೀನಗಡ, ಉಮೇಶ ಶಿವನಗೌಡರ, ಯಲ್ಲಪ್ಪ ಮನ್ನಿಕಟ್ಟಿ, ವಿಜಯ ಕಟ್ಟಿಮಠ, ಶೌಕತ ಹುನಕುಂಟಿ, ವಿಜಯ ಹನುಮಸಾಗರ, ದಾನೇಶ ಸಿನ್ನೂರ, ಈರಣ್ಣ ಸೂಳಿಭಾವಿ, ಮಲ್ಲಿಕಾರ್ಜುನ ಬೆಳವಣಿಕಿ, ರಾಜು ಘಟ್ನೂರ, ಗಿರೀಶ ರಂಜನಗಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net