

ಕಾರವಾರ: ಹೊಸ ವರ್ಷವನ್ನು (Happy New Year) ಕಾರವಾರದಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಇಲ್ಲಿನ ಟ್ಯಾಗೋರ್ ಕಡಲ ತೀರದಲ್ಲಿ ಸಾವಿರಾರು ಜನ ಸೇರಿ ಮಧ್ಯ ರಾತ್ರಿ 12 ಗಂಟೆಗೆ ಸ್ವಾಗತ ಕೋರಿದರು. ಕುಟುಂಬ ಸಮೇತ ಬಂದು ಊಟ ಮಾಡಿದರು. ಡಿಜೆ ಹಚ್ಚಿಕೊಂಡು ನೃತ್ಯ ಮಾಡಿದರು. ರಾತ್ರಿ ಪಟಾಕಿ ಸಿಡಿಸಿದರು. ಆಕಾಶ ಬುಟ್ಟಿಗಳನ್ನು ಬಿಟ್ಟರು. ಪರಸ್ಪರ ಶುಭ ಕೋರಿದರು. ಇತ್ತೀಚಿನ ವರ್ಷಗಳಲ್ಲಿ ಇದೇ ವರ್ಷ ಅತಿ ಹೆಚ್ಚು ಜನ ಕಡಲ ತೀರದಲ್ಲಿ ಸೇರಿದ್ದು, ವಿಶೇಷವಾಗಿತ್ತು.
ಇದಲ್ಲದೇ ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆ ಆಯೋಜಿಸಲಾಗಿತ್ತು. ರಾತ್ರಿ 12 ಗಂಟೆಯ ಹೊತ್ತಿಗೆ ಗಂಟೆ ಹೊಡೆದು, ಪ್ರಾರ್ಥನಾ ಕಾರ್ಯ ನೆರವೇರಿಸಲಾಗಿತ್ತು.ಕೆಲವೆಡೆ, ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ ಕಾರ್ಯಕ್ರಮಗಳು ನಡೆದವು.