King Cobra: ಮತ್ತಿಘಟ್ಟಾದಲ್ಲಿ 10.5 ಉದ್ದದ ಕಾಳಿಂಗ ಸೆರೆ

King Cobra
Published on

ಶಿರಸಿ: ಭಾರಿ ಗಾತ್ರದ ಕಾಳಿಂಗ ಸರ್ಪ(King Cobra)ವನ್ನು   ತಾಲೂಕಿನ ಮತ್ತಿಘಟ್ಟಾದ ಮನೆಯೊಂದರ ಸಮೀಪ ಮಂಗಳವಾರ ಸೆರೆ ಹಿಡಿಯಲಾಗಿದೆ.

ಅಣ್ಣಪ್ಪ ಗೌಡ ಅವರಿಗೆ ಸೇರಿದ ಬಚ್ಚಲು ಒಲೆಯ ಒಳಗೆ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಶಿರಸಿಯ ಉರಗ ತಜ್ಞ ಮಾಝ್‌ ಸೈಯದ್‌ ಜಾನ್ಮನೆ ವಿಭಾಗದ ಅರಣ್ಯ ಸಿಬ್ಬಂದಿ ಸಹಕಾರದಲ್ಲಿ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಟ್ಟರು.

King Cobra ನೋಡಿದವರು ಕಂಗಾಲು

ಮಂಗಳವಾರ ಬೆಳಗ್ಗೆ ಅಣ್ಣ ಗೌಡರ ಮನೆಯವರು  ಒಲೆಗೆ ಬೆಂಕಿ ಹಾಕಲು ತೆರಳಿದ್ದ ಸಂದರ್ಭದಲ್ಲಿ ಕಟ್ಟಗೆ ಇಡುವಾಗ  ಒಲೆಯಲ್ಲಿ ಹಾ ವು ಬುಸಗುಟ್ಟುವದನ್ನು ನೋಡಿ ಕಂಗಾಲಾಗಿದ್ದಾರೆ. ನಂತರ  ಕೂಡಲೆ ಉರಗ ತಜ್ಞರಿಂದ ಹಿಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net