ಮಕ್ಕಳಿಗೆ ಬಾಲ್ಯದಲ್ಲೇ ಶಿಸ್ತು ರೂಢಿಸಿ

Hanumasaga ID card given
ಮಿಯ್ಯಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಟೈ, ಬೆಲ್ಟ್ ಹಾಗೂ ಐಡಿ ಕಾರ್ಡ್ ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷ ಶರಣಪ್ಪ ಮದ್ಲೂರ, ಮುಖ್ಯ ಶಿಕ್ಷಕ ಖಾಜಾಹುಸೇನ್ ಒಂಟೆಳಿ, ಎಸ್ಡಿಎಂಸಿ ಅಧ್ಯಕ್ಷ ಮುಖಂಡ ಗವಿಸಿದ್ದಪ್ಪ ಕುದುರಿ, ಗ್ರಾಪಂ ಸದಸ್ಯ ಶರಣಗೌಡ ಮ್ಯಾಗೇರಿ, ಶಿಕ್ಷಕರಾದ ಸದಾಶಿವಯ್ಯ ಹಿರೇಮಠ, ನಾಗನಗೌಡ ಪೊಲೀಸ್ ಪಾಟೀಲ್, ಶಾಂತಾಬಾಯಿ ಪಟ್ಟಣಶೆಟ್ಟಿ ಇದ್ದರು.
Published on

ಹನುಮಸಾಗರ: ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಶಿಸ್ತು ಕಲಿಸಬೇಕು ಎಂದು ಅಡವಿಭಾವಿ ಗ್ರಾಪಂ ಅಧ್ಯಕ್ಷ ಶರಣಪ್ಪ ಮದ್ಲೂರ ಹೇಳಿದರು.
ಇದನ್ನೂ ಓದಿ:ಕ್ರೀಡಾಕೂಟದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪ್ರಥಮ ಸ್ಥಾನ

ಸಮೀಪದ ಮಿಯ್ಯಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಟೈ, ಬೆಲ್ಟ್ ಹಾಗೂ ಐಡಿ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಯಾವ ರೀತಿ ಬೆಳೆಯುತ್ತಾರೊ ಅದನ್ನು ಜೀವನದುದ್ದಕ್ಕೂ ಪಾಲಿಸಿಕೊಂಡು ಬರುತ್ತಾರೆ. ಅವರಿಗೆ ಪ್ರತಿದಿನವೂ ಟೈ, ಬೆಲ್ಟ್ ಮತ್ತು ಐಡಿ ಕಾರ್ಡ್ ಹಾಕಿಕೊಂಡು ಶಿಸ್ತಿನಿಂದ ಶಾಲೆಗೆ ಹೋಗುವುದನ್ನು ಪಾಲಕರು ರೂಢಿಸಬೇಕು ಎಂದರು.

ಎಸ್ಡಿಎಂಸಿ ಅಧ್ಯಕ್ಷ ನಾಗಪ್ಪ, ಮುಖ್ಯಶಿಕ್ಷಕ ಖಾಜಾಹುಸೇನ ಒಂಟೆಳಿ, ಮುಖಂಡ ಗವಿಸಿದ್ದಪ್ಪ ಕುದುರಿ, ಗ್ರಾಪಂ ಸದಸ್ಯ ಶರಣಗೌಡ ಮ್ಯಾಗೇರಿ, ಶಿಕ್ಷಕರಾದ ಸದಾಶಿವಯ್ಯ ಹಿರೇಮಠ, ನಾಗನಗೌಡ ಪೊಲೀಸ್ ಪಾಟೀಲ್, ಶಾಂತಾಬಾಯಿ ಪಟ್ಟಣಶೆಟ್ಟಿ, ಅಕ್ಕಮಹಾದೇವಿ ಹಿರೇಮಠ, ಜಯಶ್ರೀ ಮದ್ಲೂರ, ಲಕ್ಷ್ಮೀ ವಾಲಿಕಾರ, ಸುಮಂಗಲಾ ಕುದುರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net