More

    ಕ್ರೀಡಾಕೂಟದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪ್ರಥಮ ಸ್ಥಾನ

    ಮಡಿಕೇರಿ: ಚೇರಂಬಾಣೆ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಮಡಿಕೇರಿ ತಾಲೂಕು ಮಟ್ಟದ ಅಂತರ ಶಾಲಾ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟದಲ್ಲಿ ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಬಾಲಕರ ವಿಭಾಗದ ಪಂದ್ಯಾಟಗಳಲ್ಲಿ ಹಾಕಿ, ಟೇಬಲ್ ಟೆನ್ನಿಸ್ ಮತ್ತು ರಿಲೇ ಓಟದಲ್ಲಿ ಪ್ರಥಮ ಸ್ಥಾನಗಳಿಸಿ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.


    ಬಾಲಕರ ವಿಭಾಗದಲ್ಲಿ ಎಸ್.ಆರ್.ಹರ್ಷಿತ್ ೪೦೦ ಮೀ, ೬೦೦ ಮೀ ಓಟದಲ್ಲಿ ಪ್ರಥಮ ಮತ್ತು ೪೧೦೦ ಮೀ ರಿಲೇ ಓಟದಲ್ಲಿ ಪ್ರಥಮ ಸ್ಥಾನಗಳಿಸಿ ವೈಯಕ್ತಿಕ ಚಾಂಪಿಯನ್‌ಶಿಪ್ ಪಡೆದುಕೊಂಡರೆ ಡೆಬ್ ಮಲ್ಯ ಮೈತಿ ೧೦೦ ಮೀ, ೨೦೦ ಮೀ. ಓಟದಲ್ಲಿ ಪ್ರಥಮ ಮತ್ತು ೪೧೦೦ ಮೀ ರಿಲೇ ಓಟದಲ್ಲಿ ಪ್ರಥಮ ಸ್ಥಾನಗಳಿಸಿ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದುಕೊಂಡರು. ಎನ್.ಪಿ.ಬೋಪಣ್ಣ ಎತ್ತರ ಜಿಗಿತದಲ್ಲಿ ಪ್ರಥಮ, ೨೦೦ ಮೀ. ಓಟದಲ್ಲಿ ದ್ವಿತೀಯ, ೪೧೦೦ ರಿಲೇ ಓಟದಲ್ಲಿ ಪ್ರಥಮ ಸ್ಥಾನಗಳಿಸಿದರೆ ಗವಿನ್ ೪೧೦೦ ಮೀ ರಿಲೇ ಓಟದಲ್ಲಿ ಪ್ರಥಮ ಸ್ಥಾನಗಳಿಸಿದರು.


    ಬಾಲಕಿಯರ ವಿಭಾಗದ ಹಾಕಿಯಲ್ಲಿ ಪ್ರಥಮ ಮತ್ತು ಟೇಬಲ್ ಟೆನ್ನಿಸ್‌ನಲ್ಲಿ ದ್ವಿತೀಯ ರಿಲೇ ಓಟದಲ್ಲಿ ಪ್ರಥಮ ಸ್ಥಾನಗಳಿಸಿದರು. ಎಚ್.ಪಿ.ಶಾಂಭವಿ ೪೦೦ ಮೀ. ಓಟ, ೪೧೦೦ ಮೀ ರಿಲೇ ಓಟ ಪ್ರಥಮ, ೬೦೦ ಮೀ. ಓಟ ಮತ್ತು ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನಗಳಿಸಿ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದುಕೊಂಡರು. ಚಶ್ಮಿತ ವಿ.ಡಿ ತಟ್ಟೆ ಎಸೆತ ಪ್ರಥಮ, ಗುಂಡು ಎಸೆತದಲ್ಲಿ ದ್ವಿತೀಯ, ರೀತಾ ಕೆ.ಎಸ್ ೨೦೦ ಮೀ ಪ್ರಥಮ, ೪೧೦೦ ಮೀ ರಿಲೇ ಓಟ ಪ್ರಥಮ, ೧೦೦ ಮೀ ತೃತೀಯ, ನೇಕ್ಷಾ ಸಿ.ಡಿ ೨೦೦ ಮೀ. ಪ್ರಥಮ, ೪೧೦೦ ರಿಲೇ ಓಟ ಪ್ರಥಮ, ಮಂಜುಳ ವೈ.ಯು. ಉದ್ದ ಜಿಗಿತ ತೃತೀಯ, ೪೧೦೦ ಮೀ ರಿಲೇ ಓಟ ಪ್ರಥಮ, ಕೃತಿಕಾ ಎಂ.ಎಲ್ ೬೦೦ ಮೀ ಓಟದಲ್ಲಿ ತೃತೀಯ ಸ್ಥಾನ ಪಡೆದುಕೊಂಡರು.


    ಇವರಿಗೆ ಶಾಲಾ ಮುಖ್ಯ ಶಿಕ್ಷಕಿ ಎಚ್.ಕೆ.ಸುಶೀಲ, ಶಾಲಾ ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷ ಜಿ.ಡಿ.ಶಿವಶಂಕರ್, ಎಸ್‌ಡಿಎಂಸಿ ಸದಸ್ಯರು ಹಾಗೂ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಬಿ.ಎಲ್.ಸಂದೇಶ್ ಅವರು ಅಭಿನಂದನೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts