108 ಅಂಬ್ಯುಲೆನ್ಸ್ ನಲ್ಲಿ ಮಗುವಿಗೆ ಜನ್ಮ

AMBULENCE
ಹನುಮಸಾಗರ ಸಮೀಪದ ಕಾಟಾಪುರ ಗ್ರಾಮದ ಗರ್ಭಿಣಿಗೆ 108 ಅಂಬ್ಯುಲೆನ್ಸ್ ವಾಹನದಲ್ಲಿ ಹೆರಿಗೆ ಆಗಿರುವುದು.
Published on

ಹನುಮಸಾಗರ: ಸಮೀಪದ ಕಾಟಾಪೂರ ಗ್ರಾಮದ ಗರ್ಭಿಣಿ 108 ಅಂಬ್ಯುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಸುರಕ್ಷಿತವಾಗಿದ್ದಾರೆ.

ಕಾಟಾಪುರ ಗ್ರಾಮದ ನೀಲಮ್ಮ ಕುರಿ ಅವರಿಗೆ ಶನಿವಾರ ತಡ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಅವರನ್ನು ಪಕ್ಕದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕು ಆಸ್ಪತ್ರೆಗೆ ಅಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆರಿಗೆ ಆಗಿದೆ.

ಅಂಬ್ಯುಲೆನ್ಸ್ ಚಾಲಕ ಬಸವರಾಜ ಗಾಣಿಗೇರ, ಆರೋಗ್ಯ ಸಿಬ್ಬಂದಿ ಮಹಾಂತೇಶ ಹಡಪದ, ಆಶಾ ಕಾರ್ಯಕರ್ತೆ ವಿಜಯಲಕ್ಷೀ ಹಾಗೂ ಕುಟುಂಬಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net