ತೆರಕಣಾಂಬಿಯಲ್ಲಿ ಹನುಮ ಜಯಂತ್ಯುತ್ಸವ

06-GPT-3
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಹನುಮ ಜಯಂತ್ಯುತ್ಸವ ವಿಜೃಂಭಣೆಯಿಂದ ನೆರವೇರಿತು.
Published on

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ಶ್ರೀ ಹನುಮ ಜಯಂತಿ ಸೇವಾ ಸಮಿತಿಯ ವತಿಯಿಂದ ಶನಿವಾರ ಎರಡನೇ ವರ್ಷದ ಹನುಮ ಜಯಂತ್ಯುತ್ಸವ ವಿಜೃಂಭಣೆಯಿಂದ ನೆರವೇರಿತು.

ಈ ಅಂಗವಾಗಿ ಗ್ರಾಮದ ವೀರಾಂಜನೇಯಸ್ವಾಮಿ ದೇವಾಲಯ ಹಾಗೂ ರಸ್ತೆಯುದ್ದಕ್ಕೂ ಕೇಸರಿ ತೋರಣ ಕಟ್ಟಿ ವಿದ್ಯುತ್ ಕಂಬಗಳನ್ನು ಬಾಳೆ ಕಂದುಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆ ಮೂಲ ವಿಗ್ರಹಕ್ಕೆ ವಿಶೇಷಪೂಜೆ, ಅಭಿಷೇಕ ಹಾಗೂ ಮಹಾ ಮಂಗಳಾರತಿ ನಡೆಸಲಾಯಿತು. ಮಧ್ಯಾಹ್ನ ಮಂಗಳವಾದ್ಯ ಹಾಗೂ ಕಲಾತಂಡಗಳ ಜತೆ ಆಂಜನೇಯನ ಭಾವಚಿತ್ರವನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮುಖಂಡರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net