ಕಿಕ್ಕೇರಿಯಲ್ಲಿ ಹನುಮಂತೋತ್ಸವ

ಕಿಕ್ಕೇರಿಯಲ್ಲಿ ಹನುಮಂತೋತ್ಸವ
Published on

ಕಿಕ್ಕೇರಿ: ಹನುಮಂತನಂತೆ ಬಣ್ಣ ಹಚ್ಚಿಕೊಂಡು ಪುಟಾಣಿಗಳು, ಯುವಕರು ಹನುಮಂತೋತ್ಸದಲ್ಲಿ ಕುಣಿದು ಕುಪ್ಪಳಿಸಿದರು.

ಕುರುಹಿನಶೆಟ್ಟಿ ಜನಾಂಗದವರು ಇತ್ತೀಚೆಗೆ ಹಮ್ಮಿಕೊಂಡಿದ್ದ ಹನುಮಂತ ದೇವರ ಉತ್ಸವದಲ್ಲಿ ಯುವಕರು ಸಂಭ್ರಮದಿಂದ ಪಾಲ್ಗೊಂಡಿದ್ದರು. ಪರಸ್ಪರ ಬಣ್ಣ ಎರಚಾಡಿ ಯುವಕರು ಸಂಭ್ರಮಿಸಿದರು.

ರಜೆಯ ಸಂಭ್ರಮದಲ್ಲಿದ್ದ ಮಕ್ಕಳಿಂದ ಹನುಮೋತ್ಸವಕ್ಕೆ ರಂಗು ಬಂದಿತು. ಹನುಮೋತ್ಸವ ವೀಕ್ಷಣೆಗೆ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net