ಹನುಮೋತ್ಸವ ಪೂರ್ವಭಾವಿ ಸಭೆ

New Project (6)
Published on

ಬೆಳ್ತಂಗಡಿ: ಸಂಸ್ಕಾರ ಭಾರತಿ ಮತ್ತು ಅಳದಂಗಡಿ ಹನುಮೋತ್ಸವ ಸಮಿತಿ ವತಿಯಿಂದ ಪಿಲ್ಯ ಮಹವ್ಮಾಯೀ ಭಜನಾ ಮಂದಿರದಲ್ಲಿ ನಡೆಯುವ ಹನುಮೋತ್ಸವ 2025ರ ಕಾರ್ಯಕ್ರಮದ ಪ್ರಯುಕ್ತ ನಾವರ, ಪಿಲ್ಯ, ಸುಲ್ಕೇರಿ, ಕುದ್ಯಾಡಿ ಗ್ರಾಮದ ಉಸ್ತುವಾರಿಗಳ ಪೂರ್ವಭಾವಿ ಸಭೆ ನಡೆಯಿತು.

ಅಳದಂಗಡಿ ಶ್ರೀ ಕ್ಲಿನಿಕ್‌ನ ಡಾ.ಎನ್.ಎಂ.ತುಳುಪುಳೆ ಅಳದಂಗಡಿಯಲ್ಲಿ ನಡೆಯುವ ಹನುಮೋತ್ಸವ 2025ರ ಲಾಂಛನ ಬಿಡುಗಡೆಗೊಳಿಸಿದರು. ಸಂಸ್ಕಾರ ಭಾರತಿ ತಾಲೂಕು ಅಧ್ಯಕ್ಷ ಸಂಪತ್ ಬಿ.ಸುವರ್ಣ, ಭಜನಾ ಮಂದಿರ ಅರ್ಚಕ ಶೇಷಗಿರಿ ಭಟ್ ಮಾತನಾಡಿದರು.

ಸುಲ್ಕೇರಿ ಗ್ರಾಪಂ ಉಪಾಧ್ಯಕ್ಷರಾದ ಶುಭಕರ ಬಂಗೇರ, ಸತೀಶ್ ಶಿರ್ಲಾಲು, ವಿಶ್ವನಾಥ ಬಂಗೇರ, ರಾಜೇಶ್ ಬುಣ್ಣಾನ್, ಉಮೇಶ್ ಸುವರ್ಣ, ಹರೀಶ್ ಕಲ್ಲಾಜೆ ಪ್ರಶಾಂತ ಕರಂಬಾರು, ಸುಮನಾಜ ಪಾಡಿಪಿಲ್ಯ, ಆನಂದ ಪೂಜಾರಿ ಮಣಿಕಂಠ, ಶೈಲೇಶ್ ಪಾಡಿಪಿಲ್ಯ, ಸುಧೀರ್ ಪಾಡಿಪಿಲ್ಯ, ಪುನೀತ್ ಬಂಗೇರ, ಉಮೇಶ್ ಬಂಗೇರ, ಸತೀಶ್ ಬಂಗೇರ ದುಗ್ಗಲಚ್ಚಿಲ್, ಅವಿನಾಶ್ ಪಂಚರತ್ನ ನಾರಾಯಣ ಪೂಜಾರಿ ಪರಾರಿ, ರವಿ ಪೂಜಾರಿ ನಾವರ, ರಮಾನಾಥ ಪಾದೆಮಾರಡ್ಡ, ಉಪಸ್ಥಿತರಿದ್ದರು.

ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ನಾವರ ಸ್ವಾಗತಿಸಿದರು. ಸಂಚಾಲಕ ನಿತ್ಯಾನಂದ ಎನ್. ನಾವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net