ಹನುಮ ದೇವಸ್ಥಾನ ನಿರ್ಮಾಣ

29blh5 ಹಣಮಂತ ದೇವರ
Published on

ಬೈಲಹೊಂಗಲ: ಪಟ್ಟಣದಲ್ಲಿ ಶ್ವೇತ ಬಣ್ಣದ ಕೊಳವಿ ಶಿಲೆಯಲ್ಲಿ 1.5 ಕೋಟಿ ರೂ.ವೆಚ್ಚದಲ್ಲಿ ಶ್ರೀ ಹನುಮಂತ ದೇವರ ದೇವಸ್ಥಾನ ಜೀಣೋರ್ದ್ಧಾರ ಕಾರ್ಯ ಪ್ರಗತಿಯಲ್ಲಿದ್ದು, ಶ್ರೀ ಪೂರ್ಣಗೊಳ್ಳಲಿದೆ ಎಂದು ಕಮಿಟಿ ಅಧ್ಯ ಶ್ರೀಶೈಲ ಬೋಳನ್ನವರ ಹೇಳಿದರು. ನಗರದಲ್ಲಿ ಶನಿವಾರ ಶ್ರೀ ಹನುಮಂತ ದೇವಸ್ಥಾನಕ್ಕೆ ಸ್ಲಾಬ್​ ಹಾಕುವ ಕಾರ್ಯಕ್ಕೆ ಪೂಜೆ ನೆರವೇರಿಸಿ ಮಾತನಾಡಿದರು. ನೂರಾರು ಮಹಿಳೆಯರು ಕಡಬು, ಹೋಳಿಗೆ, ರೊಟ್ಟಿ, ಚಪಾತಿ, ಹುಳಿಬಾಣ, ಅಂಬಲಿ, ಚಟ್ನಿ, ಪಲ್ಯ ಹಾಗೂ ಬುತ್ತಿ ತಂದು ನೈವೇದ್ಯ ಸಮರ್ಪಿಸಿದರು. ಸದಾಶಿವಯ್ಯ ಪತ್ರಿಮಠಶಾಸ್ತ್ರಿ ಪೂಜೆ ನೆರವೇರಿಸಿದರು. ಮುಖಂಡರಾದ ಮಲ್ಲಿಕಾರ್ಜುನ ಬೋಳನ್ನವರ, ಮಹಾಬಳೇಶ್ವರ ಬೋಳನ್ನವರ, ಶ್ರೀಶೈಲ ಗೀರನವರ, ವಿಠ್ಠಲ ಕಡಕೋಳ, ಉಮೇಶ ಗೀರನವರ, ಭಗವಂತ ಬಡಿಗೇರ, ಗುಂಡು ಪೂಜೇರಿ, ಅನಿಲ ಬೋಳನ್ನವರ, ಈಶ್ವರ ಗೀರನವರ, ಮಹೇಶ ಪೂಜೇರಿ, ದೇವೆಂದ್ರಪ್ಪ ಪೂಜೇರಿ, ಅಜ್ಜಪ್ಪ ಗೀರನವರ, ಶಾಂತಾ ಬೋಳನ್ನವರ, ಹೇಮಾವತಿ ಭಟ್ಟಿ, ಅನಿತಾ ಹೋಟಿ, ಮಂಜುಳಾ ಮಲ್ಲಾಪುರ, ಗೌರಮ್ಮ ಪತ್ರಿಮಠ, ಶ್ರೀದೇವಿ ಪೂಜೇರಿ, ಶೈಲಾ ಬೋಳನ್ನವರ, ಸುನಂದಾ ಹರಕುಣಿ, ಸುಮಿತ್ರಾ ತುರಮರಿ, ಈರವ್ವ ಬೋಳನ್ನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net