

ಕೋಟ: ಹಂಗಾರಕಟ್ಟೆ ಚೇತನ ಪ್ರೌಢಶಾಲೆ ಪ್ರಾರಂಭೋತ್ಸವ ನಡೆಯಿತು. ಬ್ರಹ್ಮಾವರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಮ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 43 ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ವತಿಯಿಂದ ಪ್ರೋತ್ಸಾಹಧನ ನೀಡಲಾಯಿತು. ನಿವೃತ್ತಿಯಾಗುತ್ತಿರುವ ಸಂಸ್ಥೆ ಜವಾನ ಎಚ್.ಶಂಕರ್ ಅವರನ್ನು ಬೀಳ್ಕೊಡಲಾಯಿತು.
ಆಡಳಿತ ಮಂಡಳಿ ಅಧ್ಯಕ್ಷ ಬಿ.ಭರತ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯ ಬಿ.ರಾಜರಾಮ್ ಭಟ್, ಕಾರ್ಯದರ್ಶಿ ಸಿ.ಎಚ್.ಇಬ್ರಾಹಿಂ ಸಾಹೇಬ್, ಕೋಶಾಧಿಕಾರಿ ಮಹಾಬಲೇಶ್ವರ ಹೆಬ್ಬಾರ್, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಪದಾಧಿಕಾರಿಗಳಾದ ರಾಮದೇವ ಹಂದೆ, ಅರವಿಂದ ಶರ್ಮ, ಬಾಲಕೃಷ್ಣ ಪೂಜಾರಿ, ಮನೋಜ ಕುಮಾರ್, ಲೀಲಾವತಿ ಗಂಗಾಧರ್, ಕುಸುಮಾ ಮನೋಜ್ ತಾರನಾಥ ಶೆಟ್ಟಿ, ಗಣೇಶ ಜಿ., ಐರೋಡಿ ಗ್ರಾಪಂ ಉಪಾಧ್ಯಕ್ಷೆ ಗೀತಾ ಶೆಟ್ಟಿ, ಸಿ.ಆರ್.ಪಿ ಅನುಪಮಾ, ಎಸ್‌ಎಸ್‌ಎಲ್‌ಸಿ ನೋಡಲ್ ರಾಘವ್ ಶೆಟ್ಟಿ, ಶಿಕ್ಷಣ ಸಂಯೋಜಕ ಪ್ರಕಾಶ್ ಬಿ.ಬಿ, ಸಾಲಿಗ್ರಾಮ ಪಪಂ ಸದಸ್ಯೆ ಸುಲತಾ ಹೆಗ್ಡೆ, ಮುಂತಾದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಕಲ್ಪನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ಹರ್ಷವರ್ಧನ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಗೋವಿಂದರಾವ್ ವಂದಿಸಿದರು.