

ಕೋಟ: ಬ್ರಹ್ಮಾವರ ತಾಲೂಕಿನ ಹಂಗಾರಕಟ್ಟೆ ಬಾಳೆಕುದ್ರು ಶ್ರೀ ಮಠದ ಶ್ರೀ ನೃಸಿಮಹಾಶ್ರಮ ಶ್ರೀಪಾದಂಗಳವರು ಚಾತುರ್ಮಾಸ್ಯ ಅಂಗವಾಗಿ ಜು.21ರಿಂದ ಸೆ.18ರವರೆಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಆಚರಿಸುತ್ತಿದ್ದಾರೆ. ನಿತ್ಯ ಪೂಜೆ ಪೂರ್ವಾಹ್ನ 9ರಿಂದ ಅಪರಾಹ್ನ 12.30ರ ತನಕ ಸಂಜೆ 5.30ರಿಂದ ರಾತ್ರಿ 8ರವರೆಗೆ ಮಹಾಪೂಜೆ ಇತ್ಯಾದಿ ಧಾರ್ಮಿಕ ವಿಧಿ ವಿಧಾನ ನಡೆಯಲಿದೆ ಎಂದು ಮಠದ ವ್ಯವಸ್ಥಾಪಕ ಮಂಜುನಾಥ್ ಭಟ್ ತಿಳಿಸಿದ್ದಾರೆ.