ಬಾಲಕಿಗೆ ಸಹಾಯಧನ ಹಸ್ತಾಂತರ

Mul_subsidy
Published on

ಮೂಲ್ಕಿ: ಮೂಲ್ಕಿ ಅರಮನೆ ವೆಲ್ಫೇರ್ ಮತ್ತು ಚಾರಿಟೆಬಲ್ ಟ್ರಸ್ಟ್ ಪ್ರಾಯೋಜಿತ ಹೊಸ ಅರಸು ರಕ್ಷಕ ಯೋಜನೆಯಡಿ ಪ್ರಥಮ ಫಲಾನುಭವಿಯಾಗಿ ತೋಕೂರು ಗ್ರಾಮದ ಅರ್ಹ ಬಾಲಕಿಗೆ ಹತ್ತು ಸಾವಿರ ರೂ. ಸಹಾಯಧನವನ್ನು ಅರಮನೆ ವತಿಯಿಂದ ನೀಡಲಾಯಿತು.

ಮೂಲ್ಕಿ ಅರಮನೆ ವೆಲ್ಫೇರ್ ಮತ್ತು ಚಾರಿಟೆಬಲ್ ಟ್ರಸ್ಟ್ ನಿರ್ದೇಶಕ ಗೌತಮ್ ಎಂ.ಜೈನ್, ಕಾಸಪ್ಪಯ್ಯರಮನೆ ವಕೀಲ ಚಂದ್ರಶೇಖರ್ ಜಿ., ಪ್ರಿಯದರ್ಶಿನಿ ಸೊಸೈಟಿ ಅಧ್ಯಕ್ಷ ವಸಂತ ಬರ್ನಾಡ್, ಪಡುಪಣಂಬೂರು ಗ್ರಾಪಂ ಮಾಜಿ ಅಧ್ಯಕ್ಷ ವಿನೋದ್ ಸಾಲಿಯಾನ್ ಬೆಳ್ಳಾಯರು, ಸಾಮಾಜಿಕ ಸೇವಾಕರ್ತ ಧರ್ಮಾನಂದ ಶೆಟ್ಟಿಗಾರ, ತೋಕೂರು ಶ್ರೀ ಸುಬ್ರಹ್ಮಣ್ಯ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ದೀಪಕ್ ಸುವರ್ಣ, ಪಂಚಾಯಿತಿ ಸದಸ್ಯ ಸಂತೋಷ್ ತೋಕೂರು ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net