

ಸುಳ್ಯ: ಕಷ್ಟದಲ್ಲಿರುವವರನ್ನು ಗುರುತಿಸಿ ಅವರಿಗೆ ಸಹಾಯ ನೀಡಿ ಅವರ ಬದುಕಿನಲ್ಲಿ ಬೆಳಕು ನೀಡುವ ಕಾರ್ಯ ಶ್ರೇಷ್ಠವಾದುದು ಎಂದು ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದರು.
ಸುಳ್ಯದ ಸೇವಾಭಾರತಿ ಹೆಲ್ಪ್ ಲೈನ್ ಟ್ರಸ್ಟ್ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಜಾಲ್ಸೂರು ಮತ್ತು ದಾನಿಗಳ ನೆರವಿನಿಂದ ನಿರ್ಮಿಸಿದ ನೂತನ ಮನೆ ’ಸೇವಾಂಜಲಿ’ಯ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜಾಲ್ಸೂರು ಗ್ರಾಮದ ಕುಂದ್ರುಕೋಡಿ ಎಂಬಲ್ಲಿ ಲಕ್ಷ್ಮೀ ಎಂಬುವರಿಗೆ ಜಾಲ್ಸೂರು ಗ್ರಾಪಂನ ಎರಡು ಲಕ್ಷ ರೂ. ಸೇರಿ ಸೇವಾಭಾರತಿ ಹೆಲ್ಪ್‌ಲೈನ್ ಟ್ರಸ್ಟ್ ನೇತೃತ್ವದಲ್ಲಿ 7 ಲಕ್ಷ ರೂ. ಮೊತ್ತದಲ್ಲಿ ನೂತನ ಮನೆ ನಿರ್ಮಾಣ ಮಾಡಲಾಗಿತ್ತು.
ನೂತನ ಮನೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ಹಸ್ತಾಂತರ ಮಾಡಿ, ಸೇವಾಭಾರತಿಯ ಕಾರ್ಯಗಳಿಗೆ 50 ಸಾವಿರ ರೂ. ಸಹಾಯಧನ ನೀಡುವುದಾಗಿ ಘೋಷಿಸಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಬ್ರಿಜೇಶ್ ಚೌಟ ಮಾತನಾಡಿದರು. ಸೇವಾಭಾರತಿ ಹೆಲ್ತ್‌ಲೈನ್ ಟ್ರಸ್ಟ್‌ನ ಅಧ್ಯಕ್ಷ ಡಾ.ಮನೋಜ್ ಕುಮಾರ್ ಎ.ಡಿ. ಅಧ್ಯಕ್ಷತೆ ವಹಿಸಿದ್ದರು. ಜಾಲ್ಸೂರು ಗ್ರಾಪಂ ಅಧ್ಯಕ್ಷೆ ತಿರುಮಲೇಶ್ವರಿ, ಆರ್‌ಎಸ್‌ಎಸ್ ಸಂಘ ಚಾಲಕ್ ಚಂದ್ರಶೇಖರ ತಳೂರು, ಉದ್ಯಮಿ ಕೇಶವ ಅಮೈ ಲಕ್ಷ್ಮೀ ಕುಂದ್ರಕೋಡಿ ಉಪಸ್ಥಿತರಿದ್ದರು.
ಸೇವಾಭಾರತಿ ಅಧ್ಯಕ್ಷ ಡಾ.ಮನೋಜ್ ಕುಮಾರ್ ಎ.ಡಿ. ಸ್ವಾಗತಿಸಿದರು. ಉಪಾಧ್ಯಕ್ಷ ಆರ್.ಕೆ.ಭಟ್ ಕುರುಂಬುಡೇಲು ವರದಿ ವಾಚಿಸಿದರು. ಲತೀಶ್ ಗುಂಡ್ಯ ವಂದಿಸಿದರು. ದೇವಿಪ್ರಸಾದ್ ಅರಂಬೂರು ನಿರೂಪಿಸಿದರು.
ಕಾರ್ಯದರ್ಶಿ ಸುದರ್ಶನ ಎಸ್.ಪಿ., ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್, ಪ್ರಮುಖರಾದ ನ.ಸೀತಾರಾಮ, ಅಡ್ಡಂತಡ್ಕ ದೇರಣ್ಣ ಗೌಡ, ಎ.ವಿ.ತೀರ್ಥರಾಮ, ಎನ್.ಎ.ರಾಮಚಂದ್ರ, ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ಸುಧಾಕರ ಕಾಮತ್, ಮುಳಿಯ ಕೇಶವ ಭಟ್, ಎಂ.ಬಿ.ಸದಾಶಿವ, ವೆಂಕಟ್ ವಳಲಂಬೆ, ಆಶಾ ತಿಮ್ಮಪ್ಪ, ಗುಣವತಿ ಕೊಲ್ಲಂತ್ತಡ್ಕ, ಪುಲಸ್ಯ ರೈ, ಪುಷ್ಪಾ ಮೇದಪ್ಪ, ಭಾರತಿ ಉಳುವಾರು, ರಾಕೇಶ್ ರೈ ಕೆಡೆಂಜಿ, ಸುಬೋದ್ ಶೆಟ್ಟಿ ಮೇನಾಲ, ಸುರೇಶ್ ಕಣೆಮರಡ್ಕ, ಶಿವಾನಂದ ಕುಕ್ಕುಂಬಳ, ವಿನಯಕುಮಾರ್ ಕಂದಡ್ಕ, ಪ್ರದೀಪ್ ರೈ ಮನವಳಿಕೆ, ಚನಿಯ ಕಲ್ಲಡ್ಕ, ಶಂಕರ್ ಪೆರಾಜೆ, ಚಿದಾನಂದ ವಿದ್ಯಾನಗರ, ಜಯರಾಜ್ ಕುಕ್ಕೆಟ್ಟಿ, ಕೃಷ್ಣ ಶೆಟ್ಟಿ ಕಡಬ, ಕುಸುಮಾಧರ ಎ.ಟಿ, ರಾಜೇಶ್ ಮೇನಾಲ, ಕೇಶವ ಅಡಲೆ, ಸಂತೋಷ್ ಕುತ್ತಮೊಟ್ಟೆ, ವಿಕ್ರಂ ಎ.ವಿ, ಲಕ್ಷ್ಮೀ ನಾರಾಯಣ ಕಜೆಗದ್ದೆ, ಪದ್ಮನಾಭ ಭಟ್ ಕನಕಮಜಲು, ಶ್ರೀಕಾಂತ್ ಮಾವಿನಕಟ್ಟೆ, ವಿನಯಕುಮಾರ್ ಮುಳುಗಾಡು, ವಿಕಾಸ್ ಪುತ್ತೂರು, ನಾರಾಯಣ ಗೌಡ ಬೊಮ್ಮೆಟ್ಟಿ, ಜಯರಾಮ ರೈ ಜಾಲ್ಸೂರು, ಚಂದ್ರಜಿತ್ ಮಾವಂಜಿ, ಪ್ರಸಾದ್ ಕಾಟೂರು, ಸದಾನಂದ ಜಾಕೆ, ಹೇಮಂತ್ ಮಠ, ಅಶೋಕ್ ಅಡ್ಕಾರ್, ಶರತ್ ಅಡ್ಕಾರ್, ರಜತ್ ಅಡ್ಕಾರ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.