ಕೆರಾಡಿ ದೇವಳ ಜೀರ್ಣೋದ್ಧಾರಕ್ಕೆ ಡಿಡಿ ಹಸ್ತಾಂತರ

dd
ಕೆರಾಡಿ ದೇವಳ ಜೀರ್ಣೋದ್ಧಾರಕ್ಕೆ ಡಿಡಿ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು
Published on

ಸಿದ್ದಾಪುರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕುಂದಾಪುರ-2 ಅವರಿಂದ ಕಮಲಶಿಲೆ ವಲಯದ ಹಳ್ಳಿಹೊಳೆ ಕಾರ್ಯಕ್ಷೇತ್ರದ ಶ್ರೀ ಜಟ್ಟಿಗೇಶ್ವರ ಬ್ರಹ್ಮ ಯಕ್ಷೀ ಸಪರಿವಾರ ದೇವಸ್ಥಾನ ಹೊಸಮನೆ ಕೆರಾಡಿ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರದ ವತಿಯಿಂದ ಮಂಜೂರಾದ 50 ಸಾವಿರ ರೂ. ಮೊತ್ತದ ಡಿಡಿ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಯೋಜನಾಧಿಕಾರಿ ನಾರಾಯಣ್ ಪಾಲನ್ ದೇವಸ್ಥಾನಕ್ಕೆ ಭೇಟಿ ನೀಡಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅರುಣ್ ಅವರಿಗೆ ಡಿಡಿ ವಿತರಿಸಿದರು. ಸಂಜೀವ ಭೋವಿ, ಶಂಕರ್ ಭೋವಿ, ಕೃಷ್ಣ ಭೋವಿ, ಸತೀಶ್, ಅಭಿಷೇಕ್, ಸ್ಥಳೀಯ ಒಕ್ಕೂಟ ಅಧ್ಯಕ್ಷ ರವಿ ನಾಯಕ್, ವಲಯದ ಮೇಲ್ವಿಚಾರಕಿ ಸವಿತಾ ಬಾಯಿ, ಸೇವಾ ಪ್ರತಿನಿಧಿ ಕೃಷ್ಣ ನಾಯ್ಕ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net