ಮಣೂರು ಮಳಲುತಾಯಿ ದೇಗುಲದ ಪ್ರತಿಷ್ಠಾಪನಾ ವರ್ಧಂತಿ

yashaswi
ಮಣೂರು ಮಳಲುತಾಯಿ ಶ್ರೀ ದುರ್ಗಾಪರಮೇಶ್ವರಿ ದೇಗುಲದ 2ನೇ ವರ್ಷದ ಪ್ರತಿಷ್ಠಾಪನಾ ವರ್ಧಂತಿ ಕಾರ್ಯಕ್ರಮ
Published on

ಕೋಟ: ಸಾಂಸ್ಕೃತಿಕ ಲೋಕದ ಭವಿಷ್ಯದ ರುವಾರಿಗಳು ತೆಕ್ಕಟ್ಟೆ ಸಂಸ್ಥೆಯಲ್ಲಿ ವೃದ್ಧಿಗೊಳ್ಳುತ್ತಿದ್ದಾರೆ. ಯಕ್ಷಕಲೆಯಲ್ಲಿನ ವಿವಿಧ ಆಯಾಮಗಳಲ್ಲಿ ಕರಗತಗೊಂಡಿರುವ ಯಶಸ್ವೀ ಸಂಸ್ಥೆಯ ಪುಟಾಣಿಗಳು ಕರಾವಳಿ ಭಾಗದಲ್ಲಿ ಮನೆ ಮಾತಾಗಿದ್ದಾರೆ. ರಂಗ ಒದಗುತ್ತಾ ಹೋದಾಗ ಮಕ್ಕಳಲ್ಲಿನ ಕಲೆ ಪ್ರಬುದ್ಧತೆಗೊಳ್ಳುತ್ತದೆ ಎಂದು ಭಾಗವತ ಹರೀಶ್ ಕಾವಡಿ ಹೇಳಿದರು.

ಮಣೂರು ಮಳಲುತಾಯಿ ಶ್ರೀ ದುರ್ಗಾಪರಮೇಶ್ವರಿ ದೇಗುಲದ 2ನೇ ವರ್ಷದ ಪ್ರತಿಷ್ಠಾಪನಾ ವರ್ಧಂತಿ ಕಾರ್ಯಕ್ರಮದಲ್ಲಿ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆಯ ಸಿನ್ಸ್ 1999 ಶ್ವೇತಯಾನ 30ನೇಯ ಕಾರ್ಯಕ್ರಮವಾಗಿ ಮಕ್ಕಳ ಯುಗಳ ಸಂವಾದದಲ್ಲಿ ಆಡಳಿತ ಮಂಡಳಿ ರಘುರಾಮ ಶೆಟ್ಟಿಯವರನ್ನು ಗೌರವಿಸಿ ಮಾತನಾಡಿದರು.

ವಿಜಯ್ ಶೆಟ್ಟಿ, ಸುರೇಶ್, ಚಂಡೆಯ ರಾಹುಲ್ ಕುಂದರ್ ಕೋಡಿ ಉಪಸ್ಥಿತರಿದ್ದರು. ಲಂಕಾದಹನದ ಹನುಮಂತ-ಲಂಕಿಣಿ, ದ್ರೌಪದಿ ಪ್ರತಾಪದ ದ್ರೌಪದಿ-ಅರ್ಜುನ, ಕೃಷ್ಣಾರ್ಜುನದ ಸುಭದ್ರೆ-ರುಕ್ಮಿಣಿ, ಸುಧನ್ವಾರ್ಜುನದ ಸುಧನ್ವ-ಪ್ರಭಾವತಿ, ಅಭಿಮನ್ಯು-ಸುಭದ್ರೆ, ಭೀಮ-ಅರ್ಜುನರ ಸಂವಾದಗಳು ಯುಗಳ ಸಂವಾದವಾಗಿ ರಂಗ ಪ್ರಸ್ತುತಿಗೊಂಡಿತು. ಉಪನ್ಯಾಸಕ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net