

ನಾಪೋಕ್ಲು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಂಪಾಜೆ ವಲಯ ಚೆಂಬು ಗ್ರಾಮದ ಫಲಾನುಭವಿ ಕುಟುಂಬಕ್ಕೆ ಪರಿಹಾರ ಧನ ಹಸ್ತಾಂತರ ಮಾಡಲಾಯಿತು.
ಮಡಿಕೇರಿ ತಾಲೂಕು ಚೆಂಬು ಗ್ರಾಮದ ಉಂಬಳೆ ಭಾಸ್ಕರ ಮತ್ತು ಜಯಂತಿ ದಂಪತಿ ಮನೆಯೂ ಇತ್ತೀಚೆಗೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು, ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿಸಿ) ಟ್ರಸ್ಟ್ ವತಿಯಿಂದ ಇತ್ತೀಚೆಗೆ 25 ಸಾವಿರ ಪರಿಹಾರ ಧನ ಹಸ್ತಾಂತರಿಸಲಾಯಿತು.
ಯೋಜನಾಧಿಕಾರಿ ಪುರುಷೋತ್ತಮ, ವಲಯ ಮೇಲ್ವಿಚಾರಕ ಸಂತೋಷ್, ಸೇವಾ ಪ್ರತಿನಿಧಿ ಚಿದಾನಂದ, ಎಂ.ಚೆಂಬು ಒಕ್ಕೂಟದ ನಿಕಟ ಪೂರ್ವ ಕಾರ್ಯದರ್ಶಿ ವಿಜಯಕುಮಾರ್, ಎಂ.ಟಿ.ರಾಮಮೂರ್ತಿ ಇದ್ದರು.