ಪುಸ್ತಕ, ಸ್ಕೂಲ್‌ಬ್ಯಾಗ್ ಹಸ್ತಾಂತರ

bag
ಬೈಂದೂರು ವಲಯದ ಬಡಾಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬಾಲ್ಯ ಫೌಂಡೇಶನ್ ವತಿಯಿಂದ ಶೈಕ್ಷಣಿಕ ನೆರವು ನೀಡಲಾಯಿತು
Published on

ಬೈಂದೂರು: ವಲಯದ ಬಡಾಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಬಾಲ್ಯ ಫೌಂಡೇಶನ್ ವತಿಯಿಂದ ಪುಸ್ತಕ, ಸ್ಕೂಲ್‌ಬ್ಯಾಗ್ ಮತ್ತು ಶಾಲಾ ಕೊಠಡಿಗೆ ಪೇಂಟಿಂಗ್ ಕಾರ್ಯಕ್ಕಾಗಿ ಧನಸಹಾಯದ ರೂಪದಲ್ಲಿ ಚೆಕ್ ಹಸ್ತಾಂತರಿಸಲಾಯಿತು.
ಬಾಲ್ಯ ಫೌಂಡೇಶನ್ ಅಧ್ಯಕ್ಷ ಎಸ್.ನಾಗರಾಜ ಕಾರ್ಯಕ್ರಮ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಶ್ರೀಧರ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಬಾಲ್ಯ ಫೌಂಡೇಶನ್ ಉಪಾಧ್ಯಕ್ಷ ನಾರಾಯಣಸ್ವಾಮಿ ಎಚ್.ಪಿ, ಕಾರ್ಯದರ್ಶಿ ಶ್ರೀನಿಧಿ ಬಿ.ಜಿ, ಖಜಾಂಚಿ ಕಿರಣ್, ಲಕ್ಷ್ಮೀಶ ಅಡಿಗ, ಮುಖ್ಯ ಶಿಕ್ಷಕಿ ರೋಹಿಣಿ, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕ ವೃಂದ, ಪಾಲಕರು, ಹಳೇ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net