ಕುಂದಾಪುರ: ಕೋಲ್ಕತ್ತಾದಲ್ಲಿ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ, ಕುಂದಾಪುರ ವೈದ್ಯರು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕುಂದಾಪುರ ಶಾಖೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ವೈದ್ಯರ ಮೌನ ಮೆರವಣಿಗೆ ನಡೆಯಿತು.
ಐಎಂಎ ಕುಂದಾಪುರ ಶಾಖೆ ಅಧ್ಯಕ್ಷೆ ಡಾ.ಪ್ರಮೀಳಾ ನಾಯಕ್, ಸರ್ಕಾರಿ ವೈದ್ಯಾಧಿಕಾರಿಗಳ ಜಿಲ್ಲಾ ಸಂಘ ಅಧ್ಯಕ್ಷ ಡಾ.ನಾಗೇಶ್ ನೇತೃತ್ವದಲ್ಲಿ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಕೆ.ಮಹೇಶ್ಚಂದ್ರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಭಾರತೀಯ ವೈದ್ಯಕೀಯ ಸಂಘ ಕುಂದಾಪುರ ಶಾಖೆ ಕಾರ‌್ಯದರ್ಶಿ ಡಾ.ಮಹಿಮಾ ಆಚಾರ್ಯ, ಸರ್ಕಾರಿ ವೈದ್ಯಾಧಿಕಾರಿಗಳ ಜಿಲ್ಲಾ ಸಂಘ ಜಿಲ್ಲಾಧ್ಯಕ್ಷ ಡಾ.ನಾಗೇಶ್, ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ್, ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಕಾರ್ಯದರ್ಶಿ ಡಾ.ಉಮೇಶ್ ನಾಯಕ್, ಐಎಂಎ ಕುಂದಾಪುರ ಶಾಖೆ ಪ್ರಮುಖರು, ಉಡುಪಿ ದಂತ ವೈದ್ಯರ ಸಂಘ ಅಧ್ಯಕ್ಷ ಜಗದೀಶ್ ಜೋಗಿ, ಕಾರ‌್ಯದರ್ಶಿ ಡಾ.ಅತುಲ್, ಆಯುಷ್ ವೈದ್ಯರ ಸಂಘದ ಡಾ.ಹರಿಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಡಾ.ಕೃಷ್ಣ ರಾವ್, ಮೆಡಿಕಲ್ ಪ್ರತಿನಿಧಿಗಳ ಸಂಘ ವಸಂತ ಉಡುಪ, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಸುರೇಖಾ ಪುರಾಣಿಕ್ ಹಾಗೂ ಸದಸ್ಯರು, ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಸಂಘ ಪದಾಧಿಕಾರಿಗಳು, ಎಲ್ಲ ಆಸ್ಪತ್ರೆ ವೈದ್ಯರು, ದಾದಿಯರು, ಸಿಬ್ಬಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತುರ್ತು ಸೇವೆ ಮಾತ್ರ
ಕುಂದಾಪುರದ ಎಲ್ಲ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಶನಿವಾರ ತುರ್ತು ಸೇವೆ, ಅಗತ್ಯ ಚಿಕಿತ್ಸೆ ಹೊರತುಪಡಿಸಿ, ಬಾಕಿ ಎಲ್ಲ ಸೇವೆ ಸ್ಥಗಿತಗೊಳಿಸಲಾಗಿತ್ತು. ಎಲ್ಲ ಆಸ್ಪತ್ರೆಗಳಲ್ಲಿ ಹೊರ ರೋಗಿ ವಿಭಾಗ, ಕೆಲವು ಆಯ್ದ ಶಸ್ತ್ರ ಚಿಕಿತ್ಸಾ ಕೊಠಡಿ ಮುಚ್ಚಲಾಗಿತ್ತು.