

ಕೋಟ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬ್ರಹ್ಮಾವರ ತಾಲೂಕು ಪಾಂಡೇಶ್ವರ ವಲಯದ ಕಾರ್ಕಡ ಕಾರ್ಯಕ್ಷೇತ್ರಕ್ಕೆ ಒಳಪಟ್ಟ ನ್ಯೂ ಕಾರ್ಕಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವಿ.ಹೆಗ್ಗಡೆ ಅವರು ಮಂಜೂರು ಮಾಡಿದ 10 ಜೊತೆ ಬೆಂಚ್ ಡೆಸ್ಕ್ ಹಸ್ತಾಂತರ ಇತ್ತೀಚೆಗೆ ನೆರವೇರಿತು.
ಬ್ರಹ್ಮಾವರ ತಾಲೂಕು ಯೋಜನಾಧಿಕಾರಿ ರಮೇಶ್, ಎಸ್ಡಿಎಂಸಿ ಅಧ್ಯಕ್ಷ ಶಂಭು ಭಟ್, ಎಸ್ಐಡಿಐಬಿಐ ಯೋಜನೆ ಅಧಿಕಾರಿ ಪ್ರತಾಪ್, ತಾಲೂಕು ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಅಚ್ಚುತ್ ಪೂಜಾರಿ, ಪಪಂ ಸಾಲಿಗ್ರಾಮ ಉಪಾಧ್ಯಕ್ಷೆ ಗಿರಿಜಾ ಶೇಖರ್ ಪೂಜಾರಿ, ಪಪಂ ಸಾಲಿಗ್ರಾಮ ಸದಸ್ಯ ಸಂಜೀವ ದೇವಾಡಿಗ, ಬ್ರಹ್ಮಾವರ ವಲಯದ ಕಾರ್ಕಡ ಶಾಲೆ ಕ್ಲಸ್ಟರ್ ಸವಿತಾ, ವಲಯ ಅಧ್ಯಕ್ಷ ರಾಧಾ ಪೂಜಾರಿ, ವಲಯ ಮೇಲ್ವಿಚಾರಕಿ ಜಯಲಕ್ಷ್ಮೀ, ಸೇವಾ ಪ್ರತಿನಿಧಿ ಶಾರದಾ, ಶಾಲೆ ಅಧ್ಯಾಪಕ ಪ್ರಭಾಕರ್ ಕಾಮತ್ ಉಪಸ್ಥಿತರಿದ್ದರು.