‘ಕೈಮಗ್ಗ ಮೇಳ’ದಲ್ಲಿ ವೈದ್ಯಕೀಯ ಶಿಬಿರ

Handloom mela
Published on

ಬೆಂಗಳೂರು: ನೇಕಾರರ ಸೇವಾ ಕೇಂದ್ರ ಬೆಂಗಳೂರು ವತಿಯಿಂದ ಜೆ.ಪಿ. ನಗರ 7ನೇ ಹಂತದ ಪುಟ್ಟೇನಹಳ್ಳಿಯ ಶುಭ್ ಕನ್ವೆನ್ಷನ್ ಹಾಲ್‌ನಲ್ಲಿ ನಡೆಯುತ್ತಿರುವ ‘ಕೈಮಗ್ಗ ಮೇಳ’ಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಪ್ರದರ್ಶನದಲ್ಲಿ ಕೈಮಗ್ಗ ಮತ್ತು ಚರಕ ಕಾರ್ಯಾಚರಣೆ ಗ್ರಾಹಕರ ಆಕರ್ಷಣೆಯಾಗಿದ್ದು, ಸ್ವತಃ ಚರಕದಲ್ಲಿ ನೂಲು ಸುತ್ತಬಹುದಾಗಿದೆ. ಇದಲ್ಲದೆ ಬಟ್ಟೆಯ ಮೇಲೆ ಬ್ಲಾಕ್ ಪ್ರಿಂಟಿಂಗ್ ಮುದ್ರಿಸುವುದನ್ನು ಕಲಿಯಲು ಅವಕಾಶವಿದೆ. ಕೈಮಗ್ಗದ ಜೊತೆಗೆ ಕರಕುಶಲ ವಸ್ತುಗಳ ಪ್ರದರ್ಶನವೂ ಇದೆ.

ಪ್ರದರ್ಶನದ ಅಂಗವಾಗಿ ಆಯುರ್ಯೋಗಾಮೃತ್ ಆಯುರ್ವೇದಿಕ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಗುರುವಾರ (ಜ. 2) ವೈದ್ಯಕೀಯ ಶಿಬಿರ ಏರ್ಪಡಿಸಲಾಗಿದೆ. ಡಾ. ಪುಷ್ಕಲಾ ಬದರಿನಾರಾಯಣ, ಡಾ. ಗೀತಾ ಜೈಸ್ವಾಲ್, ಡಾ. ಆಯಿಷ್ ಅವರ ತಂಡ ಆರೋಗ್ಯ ತಪಾಸಣೆ ನಡೆಸಿ ವೈದ್ಯಕೀಯ ಸಲಹೆ ನೀಡಲಿದೆ. ಪ್ರದರ್ಶನದಲ್ಲಿ ಭಾಗವಹಿಸುವ ಗ್ರಾಹಕರು ಖರೀದಿ ಜತೆಗೆ ಶಿಬಿರದ ಲಾಭ ಪಡೆದುಕೊಳ್ಳುವಂತೆ ಆಯೋಜಕರು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net