ಕೈಮಗ್ಗ-ಕರಕುಶಲ ವಸ್ತುಗಳ ಪ್ರದರ್ಶನ

Art and craft
Published on

ಬೆಂಗಳೂರು: ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ, ದೇಸಿ ಸಂಸ್ಥೆ ಹಾಗೂ ರಾಗಿ ಕಣ ಸಹಯೋಗದಲ್ಲಿ ಮೇ 17ರಿಂದ 21ರವರೆಗೆ ನಗರದ ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರ (ಬಿಐಸಿ)ದಲ್ಲಿ ಕೈಮಗ್ಗ-ಕರಕುಶಲ ವಸ್ತುಗಳ ಪ್ರದರ್ಶನ, ಹವಾಮಾನ ಬದಲಾವಣೆ ಕಾಲದಲ್ಲಿ ಸುಸ್ಥಿರ ಆಯ್ಕೆಗಳು ಮತ್ತು ಗ್ರಾಮೀಣ ಆದಾಯ ಮೂಲಗಳ ಕುರಿತ ವಿಚಾರ ಸಂಕಿರಣ ಆಯೋಜಿಸಲಾಗಿದೆ.

ಮೇ 17ರಂದು ಬೆಳಗ್ಗೆ 11ಕ್ಕೆ ರಾಜ್ಯ 7ನೇ ಹಣಕಾಸು ಆಯೋಗದ ಅಧ್ಯಕ್ಷ ಸುಧಾಕರ ರಾವ್ ಮೇಳಕ್ಕೆ ಚಾಲನೆ ನೀಡಲಿದ್ದಾರೆ. 19ರಂದು ಸಂಜೆ 4.30ರಿಂದ ರಾತ್ರಿ 7ರವರೆಗೆ ನಡೆಯುವ ವಿಚಾರ ಸಂಕಿರಣದಲ್ಲಿ ಪ್ರಸನ್ನ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ವಿವಿಧ ವಿಷಯಗಳ ತಜ್ಞರು ಉಪನ್ಯಾಸ ನೀಡಲಿದ್ದಾರೆ. ಮೇಳದಲ್ಲಿ ‘ಜನರ ಕಲೆ’ ಶೀರ್ಷಿಕೆಯಡಿ ಗ್ರಾಮೀಣ ಕಲಾವಿದರು ಹಾಗೂ ಚಿತ್ರ ಕಲಾವಿದರು ರಚಿಸಿದ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ.

19ರಿಂದ 21ರವರೆಗೆ ಪ್ರತಿ ದಿನ ಬೆಳಗ್ಗೆ 10.30ರಿಂದ ರಾತ್ರಿ 8ರವರೆಗೆ ಬಿಐಸಿ ಗ್ಯಾಲರಿಯಲ್ಲಿ ಈ ಚಿತ್ರಕಲಾ ಪ್ರದರ್ಶನ ಇರಲಿದ್ದು, ಚಿತ್ರಕಲಾವಿದ ಜತಿನ್ ದಾಸ್ ಪ್ರದರ್ಶನ ಉದ್ಘಾಟಿಸಲಿದ್ದಾರೆ ಎಂದು ಚರಕ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net